ತಾಲೂಕು ಸುದ್ದಿ

ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಇದರ ವತಿಯಿಂದ ಪತ್ರಿಕಾ ದಿನಾಚರಣೆ ಜು.೩ರಂದು ಬೆಳ್ತಂಗಡಿ ತಾಲೂಕು ಪಂಚಾಯತು ಸಭಾ ಭವನದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ಆಚರಿಸಲಾಯಿತು.


ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ವಿಧಾನ ಪರಿಷತ್ ಶಾಸಕರುಗಳಾದ ಕೆ. ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಿ. ಕುಸುಮಾಧರ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಭಾಗವಹಿಸಿದ್ದರು.


ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು ವಹಿಸಿದ್ದರು.

ದಿತಿ”ಸ್ಮರಣಾರ್ಥ ಅಶಕ್ತರಿಗೆ ಆರ್ಥಿಕ ನೆರವು :
ಪತ್ರಕರ್ತರಾದ ಮನೋಹರ್ ಬಳಂಜ ಮತ್ತು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ
ಶುಶೂಷಕಿಯಾಗಿರುವ ಲಿಖಿತಾ ದಂಪತಿಯ ಪುತ್ರಿ “ದಿತಿ”ಸ್ಮರಣಾರ್ಥ ದಂಪತಿ ಪ್ರತೀವರ್ಷ ಪತ್ರಿಕಾ ದಿನಾಚರಣೆಯಂದು ಅಶಕ್ತ ಕುಟುಂಬಗಳಿಗಾಗಿ 30 ಸಾವಿರ ರೂ.ಗಳ
ಆರ್ಥಿಕ ಸಹಾಯಹಸ್ತ ಮಾಡುತ್ತಿದ್ದು, ಈ ವಷ೯ವೂ ಇಬ್ಬರ ಆರೋಗ್ಯ ಚಿಕಿತ್ಸೆ ಗೆ ಮತ್ತು ಎರಡು ಸಂಸ್ಥೆಗಳಿಗೆ ಶಾಸಕರುಗಳು ಮೂಲಕ ಚೆಕ್ ನ್ನು ಹಸ್ತಾಂತರಿಸಿದರು.

ಸಂಘದ ಕಾರ್ಯದರ್ಶಿ ಜಾರಪ್ಪ ಪೂಜಾರಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸಂಜೀವ ಎನ್.ಸಿ ವಂದಿಸಿದರು. ಹೃಷಿಕೇಶ್ ಧಮ೯ಸ್ಥಳ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮದೊಂದು ಉತ್ತರ