ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಎಳನೀರು- ಸಂಸೆ ರಸ್ತೆ ಅಭಿವೃದ್ಧಿಗೆ ಪಿ.ಸಿ.ಸಿ.ಎಫ್ ಹಾಗೂ ಎ.ಸಿ. ಸಿ .ಎಫ್ ಜೊತೆ ಶಾಸಕ ಹರೀಶ್ ಪೂಂಜ ಮಾತುಕತೆ

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಜನರು ಮೂಲಭೂತ ಸೌಕರ್ಯವಾದ ರಸ್ತೆಯ ಸೌಕರ್ಯದಿಂದ ವಂಚಿತವಾಗಿದ್ದು ತಾಲೂಕು ಕೇಂದ್ರವಾದ ಬೆಳ್ತಂಗಡಿಯನ್ನು ಸಂಪರ್ಕಿಸಲು 90 ಕಿಲೋ ಮೀಟರ್ ಸಂಚರಿಸುವ ದುಸ್ಥಿತಿಯಿದ್ದು ಈ ನಿಟ್ಟಿನಲ್ಲಿ ಎಳನೀರನ್ನು ಕೇವಲ 8 ಕಿಲೋ ಮೀಟರ್ ಅಂತರದಲ್ಲಿ ಸಂಪರ್ಕಿಸುವ ಎಳನೀರು ಸಂಸೆ ರಸ್ತೆಯನ್ನು ಅಭಿವೃಧ್ದಿ ಪಡಿಸುವುವ ಕುರಿತು ಶಾಸಕ ಹರೀಶ್ ಪೂಂಜ ಅವರು ಇಂದು ಜೂ. 24 ರಂದು  ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ PCCF ವಿಜಯ ಕುಮಾರ್ ಗೋಗಿ ಹಾಗೂ ACCF ಸುಭಾಷ್ ಕೆ ಮಾಲ್ಕೇಡೆ ಅವರೊಂದಿಗೆ ಮಾತುಕತೆ ನಡೆಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರಸ್ತೆಯ ಸರ್ವೇ ಕಾರ್ಯ ನಡೆಸಲು ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ.ಈ ಭೇಟಿಯ ಸಂದರ್ಭದಲ್ಲಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕರಾದ ಅಭಿಯಂತರ ಶಿವ ಪ್ರಸಾದ್ ಅಜಿಲ ಅವರು ಉಪಸ್ಥಿತರಿದ್ದರು.

 

ನಿಮ್ಮದೊಂದು ಉತ್ತರ