ತಾಲೂಕು ಸುದ್ದಿ

ತಾಲೂಕಿನ 13 ಆಸ್ಪತ್ರೆಗಳಿಗೆ ಶಾಸಕ ಹರೀಶ್ ಪೂಂಜ ರಿಂದ ರೂ.65 ಸಾವಿರ ಮೌಲ್ಯದ ಔಷಧಿ ಕಿಟ್ ವಿತರಣೆ

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಒಳಪಟ್ಟ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೂ.65,000 ಮೌಲ್ಯದ ಜಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳನ್ನು ಒಳಗೊಂಡ  ಔಷಧಿ ಕಿಟ್ ನ್ನು  ಶಾಸಕ ಹರೀಶ್ ಪೂಂಜ ಅವರು ವೈಯಕ್ತಿಕ ನೆಲೆಯಲ್ಲಿ ಮೇ 25 ರಂದು ಪ್ರವಾಸಿ ಮಂದಿರದಲ್ಲಿ ತಾಲೂಕು ಆರೋಗ್ಯಧಿಕಾರಿ ಡಾ.‌ಎಚ್. ಕಲಾಮಧು ಮೂಲಕ ಆಸ್ಪತ್ರೆಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾಜಿ ತಾ.ಪಂ. ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಮಹಾಬಲ ಗೌಡ ಅವರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ