ಜಿಲ್ಲಾ ವಾರ್ತೆತಾಲೂಕು ಸುದ್ದಿ

ಶೀರೂರು ಮಠದ ಉತ್ತರಾಧಿಕಾರಿಯಾಗಿ ನಿಡ್ಲೆಯ ಅನಿರುದ್ಧ ನೇಮಕ

ಬೆಳ್ತಂಗಡಿ : ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠದ 31 ನೇ ಪೀಠಾಧಿಪತಿಯಾಗಿ ಬೆಳ್ತಂಗಡಿ ತಾಲೂಕು ನಿಡ್ಲೆ ಮಚ್ಚಳೆ ಮನೆತನದ ಉದಯಕುಮಾರ್ ಸರಳತ್ತಾಯ ಮತ್ತು ಶ್ರೀಮತಿ ವಿದ್ಯಾ ದಂಪತಿ ಮತ್ರ 16 ರ ಹರೆಯದ ಅನಿರುದ್ಧ ಅವರು ಆಯ್ಕೆಯಾಗಿದ್ದಾರೆ. ಸನ್ಯಾಸ ದೀಕ್ಷಾ ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಮೇ.11 ರ ಶ್ರೀ ರಾಮ ನವಮಿಯ ಶುಭ ದಿನದಂದು ಹಿ ರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ನಡೆಯಲಿದ್ದು, ಮುಂದೆ ಶಿರಸಿ ಸಮೀಪದ ಸೋಂದೆ ಶ್ರೀ ವಾದಿರಾಜ ಮಠದಲ್ಲಿ ಮೇ 13 ರಂದು ವಟುವಿಗೆ ಸ ನ್ಯಾಸ ದೀಕ್ಷೆ, ಪಟ್ಟಾಭಿಷೇಕ ನಡೆಯಲಿದೆ.

ಮೂಲತಃ ಧರ್ಮಸ್ಥಳ ಸಮೀಪದ ನಿಡ್ಲೆಯವರಾದ ಉದಯಕುಮಾರ್ ಸರಳತ್ತಾಯರ ಪುತ್ರ ಅನಿರುದ್ಧ ಹತ್ತನೇ ತರಗತಿಯ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ

ಬಾಲ್ಯದಿಂದಲೇ ಅಧ್ಯಾತ್ಮದಲ್ಲಿ ಆಸಕ್ತಿ ,ಒಲವು ಹೊಂದಿದ್ದು, ವಟುವಿಗೆ ಕಳೆದ 2 ವರ್ಷಗಳಿಂದ ಮಧ್ವ ಸಿದ್ಧಾಂತ ಹಾಗೂ ವೇದ ,ವೇದಾಂತ ವಿಷಯಗಳನ್ನು ಬೋಧಿಸಲಾಗುತ್ತಿದೆ. ತಾನೇ ಸ್ವತಃ ಶಿರೂರು ಮಠಕ್ಕೆ ಯತಿಯಾಗಿ ತೆರಳುವೆನೆಂದು ತನ್ನ ಅಭಿಪ್ರಾಯವನ್ನು ತಂದೆ ಬಳಿ ವ್ಯಕ್ತಪಡಿಸಿದ್ದರಿಂದ ಈ ಅಭಿಪ್ರಾಯವನ ಪರಿಗಣನೆಗೆ ತೆಗೆದುಕೊಂಡು ಸರಳತ್ತಾಯರು ಮತ್ರನ ಜಾತಕವನ್ನು ನಾಗಪುರ, ಕಾಶಿ, ಉಡುಪಿ ಸಹಿತ ವಿವಿಧೆಡೆ ಜ್ಯೋತಿಷಿಗಳಲ್ಲಿ ವಟುವಿನ ಸನ್ಯಾಸ ಯೋಗದ ಬಗ್ಗೆ ಜಾತಕವನ್ನು ಪರಾಮರ್ಶಿಸಲಾಗಿದೆ. ಎಲ್ಲೆಡೆ ಸಕಾರಾತ್ಮಕ ಉತ್ತರ ದೊರೆತಿದ್ದು, ಮೇ ಎರಡನೇ ವಾರದಲ್ಲಿ ಸೋಂದಾ ಕ್ಷೇತ್ರದ ವಾದಿರಾಜ ಶ್ರೀಗಳ ಸನ್ನಿಧಿಯಲ್ಲಿ ಸನ್ಯಾಸ ದೀಕ್ಷೆ ನೀಡಲು ಸೋದೆ ಶ್ರೀಗಳು ನಿರ್ಧರಿಸಿದ್ದಾರೆ,

ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳು 2018 ಜುಲೈ19 ರಲ್ಲಿ ಹರಿಪಾದ ಸೇರಿದ ಹಿನ್ನೆಲೆಯಲ್ಲಿ ಮಠದ ಆಡಳಿತವನ್ನು ದ್ವಂದ್ವ ಮಠವಾದ ಸೋದೆ ಮಠನೋಡಿಕೊಳ್ಳುತ್ತಿದೆ.

ನಿಮ್ಮದೊಂದು ಉತ್ತರ