ತಾಲೂಕು ಸುದ್ದಿ

ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನೋಂಪಿ ಉದ್ಯಾಪನ

ಬೆಳ್ತಂಗಡಿ: ಅಳದಂಗಡಿಯ ಗುಣವಂತನಿಲಯದ ಶಾಂತಲಾ ಮಿತ್ರ ಸೇನ ಜೈನ್, ಧರ್ಮಸ್ಥಳದ ಅರುಣಾ ವೀರು ಶೆಟ್ಟಿ ಮತ್ತು ಸೌಮ್ಯ ಸುಭಾಶ್ ಅವರಿಂದ ನೋಂಪಿ ಉದ್ಯಾಪನಾ ಸಮಾರಂಭ ಶುಕ್ರವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯಿತು.

ಪುರೋಹಿತರಾದ ಶಿಶಿರ ಇಂದ್ರ, ಶ್ರೀಕೀರ್ತಿ, ಶ್ರೀಪಾಲ ಮತ್ತು ಪಾರ್ಶ್ವನಾಥ ಪೂಜಾ ವಿಧಿ-ವಿಧಾನಗಳಲ್ಲಿ ಸಹಕರಿಸಿದರು.
ಸೌಮ್ಯಸುಭಾಶ್ ಮತ್ತು ಶಿಶಿರ ಇಂದ್ರರ ಪೂಜಾ ಮಂತ್ರ ಪಠಣ ಹಾಗೂ ಸುಶ್ರಾವ್ಯ ಜಿನಭಕ್ತಿಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಸೋನಿಯಾವರ್ಮ ಉಪಸ್ಥಿತರಿದ್ದರು.
“ನಂದೀಶ್ವರ ಭಕ್ತಿ ಹಾಗೂ ಉದ್ಯಾಪನಾ ಪೂಜಾವಿಧಾನ” ಎಂಬ ಕೃತಿಯನ್ನು ಶಾಸ್ತ್ರದಾನವಾಗಿ ಎಲ್ಲರಿಗೂ ವಿತರಿಸಲಾಯಿತು.
ಅಳದಂಗಡಿಯ ಮಿತ್ರಸೇನ ಜೈನ್, ಧರ್ಮಸ್ಥಳದ ವೀರು ಶೆಟ್ಟಿ ಮತ್ತು ಸುಭಾಷ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು, ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

ನಿಮ್ಮದೊಂದು ಉತ್ತರ