ತಾಲೂಕು ಸುದ್ದಿ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಇದುವರೆಗೆ ಇಷ್ಟು ದ್ವೇಷ ರಾಜಕೀಯ ಇರಲಿಲ್ಲ : ಶ್ರೀನಿವಾಸ್ ರಾವ್

       ಬಿಜೆಪಿ ಪತ್ರಿಕಾಗೋಷ್ಠಿ

ಬೆಳ್ತಂಗಡಿ : ಬೆಳ್ತಂಗಡಿ ಅನೇಕ ನಾಯಕರುಗಳು ಶಾಸಕರಾಗಿ ಹೋದ ಕ್ಷೇತ್ರ ಆದರೆ ದ್ವೇಷ ರಾಜಕೀಯ ಇರಲಿಲ್ಲ. ವಸಂತ ಬಂಗೇರರು ಇರುವಾಗ ಈ ರೀತಿ ನಡೆದಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಹೇಳಿದರು.

ಅವರು ಜೂ.6ರಂದು ಗುರುವಾಯನಕೆರೆ ನವಶಕ್ತಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕಳೆಂಜದಲ್ಲಿ ಎಸ್ ಟಿ ಮುಖಂಡ ರಾಜೇಶ್ ನ ಮೇಲಿನ ಹಲ್ಲೆಯ ಹಿಂದೆ ಕೊಲೆಯ ಪ್ರಯತ್ನ ನಡೆದಿದೆ ಎಂಬುವುದು ಸ್ಪಷ್ಟ. ಜಾತಿ ನಿಂದನೆಯನ್ನು ಕುಶಾಲಪ್ಪ ಗೌಡ ರವರು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸನ್ನು ಹಾಕುವುದರ ಮೂಲಕ ಸುಳ್ಳಿನ ಕಂತೆಗಳ ಸುರಿಮಳೆ ಇವತ್ತು ಆಗುತ್ತಿದೆ. ಪರಿಶಿಷ್ಟ ಪಂಗಡದ ವ್ಯಕ್ತಿಗೆ ಈ ರೀತಿ ಮಾಡ್ತಾರೆ ಎಂದಾದರೆ ಇನ್ನೂ ಸಾಮಾನ್ಯ ಜನರ ಕಥೆ ಏನು?, ಈ ರೀತಿಯ ಕೀಳು ಮಟ್ಟದ ರಾಜಕೀಯವನ್ನು ನಾನು ನೋಡಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ರಾಜ್ಯ ಸಮಿತಿ ಸದಸ್ಯ ಕೊರಗಪ್ಪ ನಾಯ್ಕ, ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ