ತಾಲೂಕು ಸುದ್ದಿ

ಮಾ.19 ಕುಲಾಲ ಸಮುದಾಯ ಭವನ ಶಿಲಾನ್ಯಾಸ: ಪೂವಾ೯ಭಾವಿ ಸಮಾಲೋಚನಾ ಸಭೆ

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಕನಸಿನ ಹೊಸ ʻಭವ್ಯ ಕುಲಾಲ ಸಮುದಾಯ ಭವನʼ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವ ನಿಟ್ಟಿನಲ್ಲಿ ತಾಲೂಕು ಸಂಘದ ಕಾಯ೯ಕಾರಿ ಸಮಿತಿ, ಕಟ್ಟಡ ಸಮಿತಿ, ಯುವ ವೇದಿಕೆ ಹಾಗೂ ಸವ೯ ಸದಸ್ಯರ ಸಮಾಲೋಚನಾ ಸಭೆಯು ಫೆ.26ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಜರುಗಿತು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರೀಶ್‌ ಕಾರಿಂಜ ಅವರು ವಹಿಸಿ ಮಾತನಾಡಿ, ಶಾಸಕ ಹರೀಶ್‌ ಪೂಂಜ ಅವರು ಸರಕಾರದಿಂದ ನಮ್ಮ ಭವ್ಯ ಕುಲಾಲ ಸಮುದಾಯ ಭವನ ನಿಮಾ೯ಣಕ್ಕೆ ರೂ. 1.50 ಕೋಟಿ ಮಂಜೂರುಗೊಳಿಸಿದ್ದಾರೆ. ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ಮಾ.19ರ ಒಳಗೆ ಭವನದ ಶಿಲಾನ್ಯಾಸ ನೆರವೇರಿಸಬೇಕಾಗಿದೆ. ಈ ಕಾಯ೯ಕ್ರಮ ಅಭೂತ ಪೂವ೯ವಾಗಲು ಸಮಾಜ ಬಾಂಧವರು ಪೂಣ೯ ಸಹಕಾರ ನೀಡಬೇಕು, ಕಾಯ೯ಕ್ರಮದ ದಿನ ಸುಮಾರು 5 ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಭಾಗವಹಿಸಬೇಕು ಎಂದು ಕರೆ ನೀಡಿದರು.ಸಭೆಯಲ್ಲಿ ಶಿಲಾನ್ಯಾಸ ಕಾಯ೯ಕ್ರಮವನ್ನು ಮಾಡುವ ಬಗ್ಗೆ ಚಚಿ೯ಸಲಾಯಿತು. ಮಾ.19ರಂದು ಅದಿತ್ಯವಾರ ಕುಲಾಲ ಭವನಕ್ಕೆ ಶಿಲಾನ್ಯಾಸವನ್ನು ನೆರವೇರಿಸುವುದೆಂದು ತೀಮಾ೯ನಿಸಲಾಯಿತು. ಆ ದಿನ ಗುರುವಾಯನಕೆರೆಯ ಶಾರದಾ ಮಂಟಪದ ಬಳಿಯಿಂದ ಸ್ವಾಮೀಜಿಯವರನ್ನು ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅತಿಥಿ-ಗಣ್ಯರನ್ನು ಭವ್ಯವಾದ ಮೆರವಣಿಗೆಯಲ್ಲಿ ಶಿಲಾನ್ಯಾಸದ ಸ್ಥಳದವರೆಗೆ ಕರೆ ತರುವುದು, ಮೆರವಣಿಗೆಯಲ್ಲಿ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಭಾಗವಹಿಸುವುದು, ಮೆರವಣಿಗೆ, ನಗರದ ಅಲಂಕಾರ, ಬ್ಯಾನರ್‌ ಅಳವಡಿಕೆ, ಶಿಲಾನ್ಯಾಸ ನಡೆಯಲಿರುವ ಸಂಘದ ಜಾಗದ ಸಮತಟ್ಟು, ಮಧ್ಯಾಹ್ನ ಊಟೋಪಚಾರದ ವ್ಯವಸ್ಥೆ ಸೇರಿದಂತೆ ಕಾಯ೯ಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ನಿಧ೯ರಿಸಲಾಯಿತು.

ಸಭೆಯಲ್ಲಿ ಪ್ರಮುಖರಾದ ಯತೀಶ್‌ ಸಿರಿಮಜಲು, ಉಮೇಶ್‌ ಗುರುವಾಯನಕೆರೆ, ಸಂತೋಷ್‌ ಭಾಗ೯ವಿ, ಉದಯ ಬಿ.ಕೆ ಬಂದಾರು, ಸದಾನಂದ ಕುಲಾಲ್‌ ಸಿರಿಮಜಲು, ಸತೀಶ್‌ ಬಂಗೇರ, ಪದ್ಮನಾಭ ಅಳದಂಗಡಿ, ಅಶೋಕ್‌ ಕುಲಾಲ್‌ ನಾಲ್ಕೂರು, ಡೀಕಯ್ಯ ಕೆ. ಬಳೆಂಜ, ಮುಖೇಶ್‌ ಕುಲಾಲ್‌ ಬರಾಯ, ದಿನೇಶ್‌ ಮೂಲ್ಯ ಮಾಲಾಡಿ, ಹರಿಶ್ಚಂದ್ರ ಪಾಂಡೇಶ್ವರ, ಹರೀಶ್‌ ಮೂಲ್ಯ, ಬಿ.ಎಸ್‌ ಕುಲಾಲ್‌ ಗುರುವಾಯನಕೆರೆ ಮೊದಲಾದವರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.

ನಿಮ್ಮದೊಂದು ಉತ್ತರ