ರಾಜ್ಯ ವಾರ್ತೆ

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಮಹಾಸಭೆ

ಅರಣ್ಯ ಮೂಲ ಬುಡಕಟ್ಟು ಸಮುದಾಯದ ಜಲಂತ ಸಮಸ್ಯೆಗಳಾದ, ಅರಣ್ಯ ಹಕ್ಕು ಕಾಯ್ದೆ, ದರ್ಕಾಸು ಮಂಜೂರಾತಿ, ಶಿಕ್ಷಣ ಉದ್ಯೋಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ, ಪ್ರಾತಿನಿಧ್ಯ ನೀಡುವುದು, ಮಹಿಳಾ ಸಬಲೀಕರಣ, ವಸತಿ ಶಾಲೆಗಳ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಜಾತಿ ಪ್ರಮಾಣ ಪತ್ರದಲ್ಲಿರುವ ಗೊಂದಲ, ಭೂ ಪರಿವರ್ತನೆ ಮೂಲ ಬುಡಕಟ್ಟು ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸುಧೀರ್ಘ ಚರ್ಚೆಬೆಳ್ತಂಗಡಿ: ಸೆ. 24 /25 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಮಹಾಸಭೆಗ ಜರಗಿದ್ದು ಈ ಸಭೆಯಲ್ಲಿ ರಾಜ್ಯದ್ಯಂತ ಇರುವ ಅರಣ್ಯ ಮೂಲ ಬುಡಕಟ್ಟು ಸಮುದಾಯದ ಜಲಂತ ಸಮಸ್ಯೆಗಳಾದ, ಅರಣ್ಯ ಹಕ್ಕು ಕಾಯ್ದೆ, ದರ್ಕಾಸು ಮಂಜೂರಾತಿ ದರ್ಕಾಸು ಮಂಜೂರಾತಿ, ಶಿಕ್ಷಣ ಉದ್ಯೋಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ, ಪ್ರಾತಿನಿಧ್ಯ ನೀಡುವುದು, ಮಹಿಳಾ ಸಬಲೀಕರಣ, ವಸತಿ ಶಾಲೆಗಳ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಜಾತಿ ಪ್ರಮಾಣ ಪತ್ರದಲ್ಲಿರುವ ಗೊಂದಲ, ಲೈನ್ ಮನೆಗಳ ಸಮಸ್ಯೆ, ಖಾಸಗಿ ಆಸ್ಪತ್ರೆಗಳಲ್ಲಿ ವೈದಿಕ ವೆಚ್ಚ ನೀಡುವುದು, ಭೂ ಪರಿವರ್ತನೆಗೆ ಸಂಬಂಧಿಸಿದ ವಿಷಯ, ಅಲೆಮಾರಿ ಅರೆ ಅಲೆಮಾರಿ ಅತಿ ಸೂಕ್ಷ್ಮ ಬುಡಕಟ್ಟು ಪಟ್ಟಿಗೆ ಸೇರ್ಪಡೆ, ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಕುಲಶಾಸ್ತ್ರ ಅಧ್ಯಯನ ಸೇರಿದಂತೆ ಇನ್ನು ಹಲವಾರು ವಿಚಾರಗಳ ಬಗ್ಗೆ ಸುಧೀರ್ಘ ಚರ್ಚೆ ನಡೆದಿದ್ದು ಸಮಸ್ಯೆ ಪರಿಹಾರಕ್ಕಾಗಿ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನ ಭೇಟಿ ಮಾಡುವುದಾಗಿ ತೀರ್ಮಾನಿಸಲಾಯಿತು ಈ ಸಂದರ್ಭ, ರಾಜ್ಯ ಸಂಚಾಲಕರುಗಳನ್ನು, ಆಯ್ಕೆ ಮಾಡಲಾಗಿದ್ದು ದಕ ಜಿಲ್ಲಾ ಸಂಚಾಲಕರಾಗಿ ಬಾಲಕೃಷ್ಣ ಕೊಳಲಿ ಆಯ್ಕೆಯಾಗಿರುತ್ತಾರೆ, ಉಡುಪಿ ಜಿಲ್ಲಾ ಸಂಚಾಲಕರಾಗಿ ಗೀತಾ ಮತ್ತಾವು ಆಯ್ಕೆಯಾಗಿರುತ್ತಾರೆ,

ನಿಮ್ಮದೊಂದು ಉತ್ತರ