ರಾಜ್ಯ ವಾರ್ತೆ

ಕಾಮನ್ ವೆಲ್ತ್ ಗೇಮ್ಸ್ ನ ವೆಲ್ಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಗುರುರಾಜ್ ರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಅಭಿನಂದನೆ

ಮಂಗಳೂರು:ಕಾಮನ್ ವೆಲ್ತ್ ಗೇಮ್ಸ್ ನ 61 ಕೆಜಿ ವೆಲ್ಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ ಗುರುರಾಜ್ ತವರಿಗೆ ಆಗಮಿಸಿದ್ದಾರೆ. ತವರಿಗೆ ಆಗಮಿಸುವ ವೇಳೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗುರುರಾಜ್ ರನ್ನು ಅಭಿನಂದಿಸಿದರು.

ಉಜಿರೆಯ SDM ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಓದಿರುವ ಗುರುರಾಜರ ಸಾಧನೆಯನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕೊಂಡಾಡಿದರು.

ನಿಮ್ಮದೊಂದು ಉತ್ತರ