ರಾಜ್ಯ ವಾರ್ತೆ

ವರದಿ ನೋಡಿ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಂಗಳೂರು: ನಾಡಗೀತೆಗೆ ಅವಮಾನ, ಪಠ್ಯಕ್ರಮದ ಪರಿಷ್ಕರಣೆಯ ವೇಳೆ ಲೋಪದ ಆರೋಪದ ಕುರಿತು ರಾಜ್ಯದ ಪ್ರಾಥಮಿಕ ಹಾಗೂ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಮೇ.31 ರ ಮಂಗಳವಾರ ಸಂಜೆ ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಅವರ ಸಮಯ.
ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ನೀಡುವ ವರದಿ ಆಧಾರದಲ್ಲಿ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ
ವಿರುದ್ಧ ಕ್ರಮ ಕೈಗೊಳ್ಳಲಾಗುವುದು,
ಬೆಂಗಳೂರಿಗೆ ತೆರಳಿದ ನಂತರ ಶಿಕ್ಷಣ ಸಚಿವರು ವರದಿ ಕೊಡಲಿದ್ದಾರೆ. ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲು ಎಂದವರು ಹೇಳಿದರು.

ಶಿಕ್ಷಣ ಸಚಿವರು ಆದಿಚುಂಚನಗಿರಿ ಮಠಾಧೀಶರನ್ನು ಭೇಟಿಯಾಗಿ ಮಾತುಕತೆ ಇದೆ. ಎಲ್ಲ ಆಯಾಮಗಳ ಅಧ್ಯಯನ ನಡೆಸಿ, ಸತ್ಯಾಂಶ ಕುರಿತು ಮಾಹಿತಿ ನೀಡುವರು,
ಮಂಗಳೂರು ಮಳಲಿ ಸಾರ್ವಜನಿಕ ವಿಚಾರ ನ್ಯಾಯಾಲಯದಲ್ಲಿದೆ. ಅಲ್ಲಿ ತೀರ್ಪು ಬರುವವರೆಗೆ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ನಿಮ್ಮದೊಂದು ಉತ್ತರ