ಬೆಳ್ತಂಗಡಿ: ಸದ್ಗುರು ಅವರ ‘ಮಣ್ಣು ಉಳಿಸಿ’ ವಿಶೇಷವಾಗಿರುವ ಒಂದು ಯಾತ್ರೆ . ಇವತ್ತು ವಿಶ್ವದಾದ್ಯಂತ ಈ ಅಭಿಯಾನವನ್ನು ಮಾಡುತ್ತಿದ್ದಾರೆ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಈ ಪವಿತ್ರವಾದ ಮನುಷ್ಯನ ದೇಹಕ್ಕೆ ಪವಿತ್ರವಾಗಿ ಬೇಕಾಗಿರುವಂತಹದು ಮಣ್ಣು, ಮಣ್ಣಿನಿಂದ ಎಲ್ಲಾ ಸಾಧ್ಯ ಎನ್ನುವಂತಹದ್ದು ಆನೇಕ ವರ್ಷಗಳ ಇತಿಹಾಸವಿರುವ ತಜ್ಞರು ಮತ್ತು ಪ್ರವೀಣರು ಹೇಳಿದ್ದಾರೆ ಮತ್ತೆ ಆಧುನಿಕ ಜಗತ್ತಿಗೆ ಸದ್ಗುರರವರು ಮತ್ತೊಮ್ಮೆ ಪವಿತ್ರವಾದ ಮಣ್ಣನ್ನು ಉಳಿಸುವ ಆಂದೋಲನವನ್ನು ಮಾಡುತ್ತಿದ್ದಾರೆ . ಇದು ಇಡೀ ದೇಶಕ್ಕೆ ಮಾತ್ರವಲ್ಲ ಜಗತ್ತಿನ ಮೂಲಕ ನಾವೆಲ್ಲ ಅರ್ಥಮಾಡಿಕೊಂಡು ಸದ್ಗುರು ರವರ ಕಲ್ಪನೆಯನ್ನು ಉಳಿಸಿಕೊಂಡರೆ ಮುಂದಿನ ಜನಾಂಗ ಮತ್ತು ವಿಶ್ವ ಅತ್ಯಂತ ನಿಶ್ಚಿಂತೆಯಿಂದ ಮತ್ತು ಅತ್ಯಂತ ಸುಂದರವಾಗಿ ಜೀವನ ಮಾಡಲು ಸಾಧ್ಯವಿದೆ ಎಂದು ಹೇಳಿದ್ದಾರೆ.