ಬೆಳ್ತಂಗಡಿ: ಇದೀಗ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ.
ಈ ಬಾರಿ 85.63% ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದು, ಹುಡುಗರು 81.30% ಉತ್ತೀರ್ಣರಾಗಿದ್ದಾರೆ. ಈ ಭಾರಿಯೂ ಹುಡುಗಿಯರೇ ಮೇಲುಗೈ ಪಡೆದುಕೊಂಡಿದ್ದಾರೆ.
ಮಂಡಳಿ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದ್ದು ವಿದ್ಯಾರ್ಥಿಗಳು ನೋಂದಣಿ ಮಾಡಿರುವ ಮೊಬೈಲ್ ಗಳಿಗೂ ಫಲಿತಾಂಶ ಬರಲಿದೆ.ಫಲಿತಾಂಶ
https://karresults.nic.in/# 325 33 ಗಳಲ್ಲಿ ಲಭ್ಯವಾಗಲಿದೆ.
ವಿದ್ಯಾರ್ಥಿಗಳ ಫಲಿತಾಂಶ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಲಾಖೆ ನಿಮ್ಹಾನ್ಸ್ ಸಹಾಯದೊಂದಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಹಾಯವಾಣಿ ತೆರೆದಿದೆ. ಒತ್ತಡದಲ್ಲಿರುವವರಿಗೆ 080-46110007 ಸಂಖ್ಯೆಗೆ ಕರೆ ಮಾಡಿದರೆ ಟೆಲಿ ಕೌನ್ಸೆಲಿಂಗ್ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ|ಕೆ ಸುದಾಕರ್ ತಿಳಿಸಿದ್ದಾರೆ.