ಬೆಳ್ತಂಗಡಿ: 2021-22ನೇ ಸಾಲಿನಲ್ಲಿ ಪರೀಕ್ಷಾ ಮಂಡಳಿಯು ನಡೆಸಿದಎಸ್ಎಸ್ ಎಲ್‌ಸಿ ಫಲಿತಾಂಶವನ್ನು ಮೇ 19 ರಂದು 1 ಗಂಟೆಗೆ ಬಿಡುಗಡೆ ಮಾಡಲಿದೆ.
ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ಪತ್ರಿಕಾಗೋಷ್ಠಿ ಮೂಲಕ ರಿಸಲ್ಟ್ ಪ್ರಕಟಿಸಲಿದ್ದಾರೆ.
ವಿದ್ಯಾರ್ಥಿಗಳು ವೆಬ್ ಸೈಟ್‌ಗಳಾದ
http://kseeb.kar.nic.in/
karresults.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶ ಚೆಕ್ ಮಾಡಬಹುದು. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೇ ತಮ್ಮ ಶಾಲೆಗಳಲ್ಲಿಯೂ, ಎಸ್ಎಂಎಸ್ ಮೂಲಕವು ಫಲಿತಾಂಶ ಪಡೆಯಬಹುದು.
ಸರ್ಕಾರದ ಈ ಅಧಿಕೃತ ವೆಬ್ ತಾಣದಲ್ಲಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ನಂಬರ್ ಹಾಕಿದರೆ ಸಾಕು ವಿಷಯವಾರು ಫಲಿತಾಂಶ ಹಾಗೂ ಗಳಿಸಿದ ಒಟ್ಟು ಅಂಕದ ವಿವರ ಪ್ರಕಟವಾಗಲಿದೆ. ಒಂದೇ ಸಲ ವಿದ್ಯಾರ್ಥಿಗಳು ಫಲಿತಾಂಶದ ವಿವರ ನೋಡುವ ಕಾರಣಕ್ಕೆ ಕೆಲವೊಮ್ಮೆ ಫಲಿತಾಂಶ ತೋರಿಸದಿದ್ದರೂ, ವಿದ್ಯಾರ್ಥಿಗಳು ತಾಳ್ಮೆ ಕಳೆದುಕೊಳ್ಳಬಾರದು. ಮಿಗಿಲಾಗಿ ಮೇ. 20 ರಂದೇ ಫಲಿತಾಂಶದ ವಿವರಗಳು ಆಯಾ ಶಾಲೆಗಳಿಗಲ್ಲಿ ಪ್ರಕಟವಾಗಲಿದೆ.