ರಾಜ್ಯ ವಾರ್ತೆ

ವಿಧಾನ ಪರಿಷತ್ ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆ : ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಎಂಎಲ್ಸಿ ಪ್ರತಾಪ ಸಿಂಹ ನಾಯಕ್ ನೇಮಕ

ಬೆಳ್ತಂಗಡಿ: ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿ ವಿಧಾನ ಪರಿಷತ್ ಶಾಸಕ
ಪ್ರತಾಪಸಿಂಹ ನಾಯಕ್ ನೇಮಕಗೊಂಡಿದ್ದಾರೆ.

ವಾಯುವ್ಯ ಪದವೀಧರ ಕ್ಷೇತ್ರದ ಉಸ್ತುವಾರಿಯಾಗಿ ಪ್ರತಾಪಸಿಂಹ ನಾಯಕ್ ಅವರನ್ನು ನೇಮಿಸಲಾಗಿದ್ದು, ನಾಲ್ವರು ಉಸ್ತುವಾರಿಗಳ ಪೈಕಿ ಪ್ರತಾಪ ಸಿಂಹ ನಾಯಕ್ ಒಬ್ಬರಾಗಿದ್ದಾರೆ.

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನೊಳಗೊಂಡ ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಜೂನ್13 ರಂದು ಚುನಾವಣೆ ನಡೆಯಲಿದೆ.ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ನಿನ್ನೆ ಚುನಾವಣೆ ಘೋಷಣೆಯಾಗಿದ್ದು, ಇಂದು ಬಿಜೆಪಿ ಉಸ್ತುವಾರಿಗಳ ಪಟ್ಟಿ ಬಿಡುಗಡೆ ಮಾಡಿದೆ.

ನಿಮ್ಮದೊಂದು ಉತ್ತರ