ಕೇರಳ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾಗಿ ಮಾವೆಲಿಕ್ಕರದ ಎನ್ . ಪರಮೇಶ್ವರನ್ ನಂಬೂದಿರಿ ಅವರನ್ನು ನೇಮಿಸಲಾಗಿದೆ .
ನ.16ರಿಂದ ಮುಂದಿನ ಒಂದು ವರ್ಷದ ಅವಧಿಗೆ ಪರಮೇಶ್ವರನ್ ನಂಬೂದಿರಿ ಅಯ್ಯಪ್ಪ ದೇಗುಲದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಈ ಹಿಂದೆ ಪಂಪ ಮಹಾ ಗಣಪತಿ ದೇಗುಲ,
ಚೆಟ್ಟಿಕುಲ ದೇವಾಲಯಗಳಲ್ಲಿ ಹಿಂದೆ ಪ್ರಧಾನ
ಅರ್ಚಕರಾಗಿ ಸೇವೆ ಸಲ್ಲಿಸಿದ ಪರಮೇಶ್ವರನ್
ನಂಬೂದಿರಿ ಶಬರಿಮಲೆ ಅಯ್ಯಪ್ಪ ಸ್ವಾಮಿ
ದೇಗುಲದ ಪ್ರಧಾನ ಅರ್ಚಕರಾಗಿ ಕೆಲಸ
ಮಾಡಲಿದ್ದಾರೆ. ಭಾನುವಾರ ಬೆಳಗ್ಗೆ
ದೇವಾಲಯದ ಸೋಪಾನಂನಲ್ಲಿ ಡ್ರಾ ಮೂಲಕ ಪ್ರಧಾನ ಅರ್ಚಕರ ಆಯ್ಕೆ ನಡೆಯಿತು ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ಮಾಹಿತಿ ನೀಡಿದೆ.