ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾರಪತ್ರಿಕೆ ‘ಮಂಗ್ಳೂರ್ ಬೀಟ್’ ಅನ್ನು ಉಡುಪಿಯ ಖಾಸಗಿ ಹೋಟೆಲ್ ಒಂದರಲ್ಲಿ ಆ.13 ರಂದು ಬಿಡುಗಡೆ ಗೊಳಿಸಿದರು.ಪತ್ರಕರ್ತ ರಂಜಿತ್ ಮಡಂತ್ಯಾರ್ ಸಾರಥ್ಯ ಹಾಗೂ ಮಾಲಿಕತ್ವದಲ್ಲಿ ಈ ಪತ್ರಿಕೆ ರಾಜ್ಯಾದ್ಯಂತ ಪ್ರಸಾರ ಕಾಣಲಿದ್ದು, ಈ ಪತ್ರಿಕೆಯ ಮೊದಲ ಪ್ರಾಯೋಗಿಕ ಸಂಚಿಕೆಯನ್ನು ಬೊಮ್ಮಾಯಿ ಬಿಡುಗಡೆ ಗೊಳಿಸಿ ಶುಭ
ಕೋರಿದರು.ಪತ್ರಿಕೆಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪತ್ರಿಕೆ ವಿಭಿನ್ನ ರೀತಿಯಲ್ಲಿರುವುದರಿಂದ ಓದುಗರು ಇದನ್ನು ಖಂಡಿತಾ ಇಷ್ಟಪಡಲಿದ್ದಾರೆ. ಈ ಪ್ರತಿಕೆ ರಾಜ್ಯಾದ್ಯಂತ ಪ್ರಸಾರ ಕಂಡು ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಪತ್ರಕರ್ತನಾಗಿದ್ದುಕೊಂಡು ಕರಾವಳಿಗೆ ಒಂದು ವಿಶಿಷ್ಟ ಪೂರ್ಣ ಪತ್ರಿಕೆ ಕನಸು ಇಟ್ಟು ಮಂಗ್ಳೂರ್ ಬೀಟ್ ಕಪ್ಪು ಬಿಳುಪು ಬಣ್ಣದ ಪತ್ರಿಕೆಯಾಗಿದೆ. ಅನುಭವಿ ತಂಡದೊಂದಿಗೆ, ವಿಭಿನ್ನ ಪುಟ ವಿನ್ಯಾಸ ಹೊಂದಿರುವ ಪತ್ರಿಕೆ ಹಲವು ವೈ಼ಶಿಷ್ಟ್ಯಪೂರ್ಣ ಬರಹ, ಅಪರಾಧ ಸುದ್ದಿ ವಿಶ್ಲೇಷಣೆ, ವಿಭಿನ್ನ ಶೈಲಿಯ ಲೇಖನಗಳನ್ನೊಳಗೊಂಡ ಪತ್ರಿಕೆಯಾಗಿದೆ ಎಂದು ರಂಜಿತ್ ಮಡಂತ್ಯಾರ್ ಈ ಸಂದರ್ಭದಲ್ಲಿ ತಿಳಿಸಿದರು.ಆಷಾಢ ಮಾಸದ ನಾಗರ ಪಂಚಮಿ ದಿನವೇ ಅದು ಕೂಡಾ ರಾಜ್ಯದ ಮುಖ್ಯಮಂತ್ರಿ ಅವರ ಅಮೃತ ಹಸ್ತದಿಂದ ಪತ್ರಿಕೆ ಉದ್ಘಾಟನೆಗೊಂಡಿರುವುದು ಸಂತಸ ಕಂಡಿದೆ ಎಂದು ರಂಜಿತ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ನೂತನ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು.