ಗ್ರಾಮಾಂತರ ಸುದ್ದಿ

ಎಸ್. ಡಿ .ಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಇಂಜಿನಿಯರ್ಸ್ ಡೇ

 

ಉಜಿರೆ: ಎಸ್. ಡಿ .ಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸೆ. 15 ರಂದು *”ಇಂಜಿನಿಯರ್ಸ್ ಡೇ”* ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಧರ್ಮಸ್ಥಳ ಡಿ.ಎಂ.ಸಿ ಯ ಸಿವಿಲ್ ಇಂಜಿನಿಯರ್ ಯಶೋಧರ ಇವರು ಇಂಜಿನಿಯರ್ಸ್ ಡೇ ಯ ಮಹತ್ವದ ಬಗ್ಗೆ ಮಾತನಾಡುತ್ತಾ, ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ, ಸಾಧನೆಗಳ ಬಗ್ಗೆ ತಿಳಿಯಪಡಿಸಿದರು. 10ನೇ ತರಗತಿ/ ಪಿಯುಸಿಯ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿರುವ ವಿವಿಧ ಅವಕಾಶಗಳು ಹಾಗೂ ವೃತ್ತಿಪರ ತಾಂತ್ರಿಕ ತರಬೇತಿಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಒದಗಿಸಿದರು. ಇಂಜಿನಿಯರ್ಸ್ ಡೇ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಸ್ಪೂರ್ತಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ಪ್ರಾಪ್ತಿ ಸ್ವಾಗತಿಸಿ, ಕುಮಾರಿ ಚಿನ್ಮಯಿ ರೈ ಅತಿಥಿ ಪರಿಚಯ ಮಾಡಿದರೆ, ಪ್ರಖ್ಯಾತ್ ದಿನದ ಮಹತ್ವವನ್ನು ತಿಳಿಸಿದರು. ಕುಮಾರಿ ಬೃಹತಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಕುಮಾರಿ ಸಿಂಚನ ಎಸ್ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ ಮುಕ್ತಾಯಗೊಂಡಿತು. ಮುಖ್ಯೋಪಾಧ್ಯಾಯನಿ ಶ್ರೀಮತಿ ಪರಿಮಳ ಎಂ.ವಿ, ವಿಜ್ಞಾನ ಸಂಘದ ಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ