ಗ್ರಾಮಾಂತರ ಸುದ್ದಿ

ಬಂದಾರು ಪಂಚಾಯತು ವ್ಯಾಪ್ತಿಯ ಶಾಲಾ ಮಕ್ಕಳಿಗೆ ಚದುರಂಗ ಸ್ಪರ್ಧೆ

 

ಬಂದಾರು:ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ವತಿಯಿಂದ 75ನೇ ಅಮೃತ ಮಹೋತ್ಸವದ ಪ್ರಯುಕ್ತ ಗ್ರಾಮ ಪಂಚಾಯತಿನ ಗ್ರಂಥಾಲಯದ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ #ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ#ದಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿನ ಸಭಾಭವನದಲ್ಲಿ ಪಂಚಾಯತು ವ್ಯಾಪ್ತಿಯ ಶಾಲಾ ಮಕ್ಕಳಿಗೆ ಚದುರಂಗ ಸ್ಪರ್ಧೆಯು ನಡೆಯಿತು.

ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ‌ಕೆ ಗೌಡ,ಪುಯಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸರೋಜಿನಿ,
ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಎಂ.ಬಿ.ಕೆ‌ ಶ್ರೀಮತಿ ಮೇಘನಾ, ಬಂದಾರು ಶಾಲಾ ಮುಖ್ಯೋಪಾಧ್ಯಾಯರಾದ ಮಂಜ ನಾಯ್ಕ್,ಕುಂಟಾಲಪಲ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ , ಸಹಶಿಕ್ಷಕರಾದ ವಿಶ್ವನಾಥ್,ಬೈಪಾಡಿ ಶಾಲಾ ಶಿಕ್ಷಕರು ,ತೀರ್ಪುಗಾರರು,ಉಪಸ್ಥಿತರಿದ್ದರು

ನಿಮ್ಮದೊಂದು ಉತ್ತರ