ಗ್ರಾಮಾಂತರ ಸುದ್ದಿ

ಕಣಿಯೂರು : ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂದಿರ ಉಂತಾನಾಜೆ ಸ್ವಚ್ಛತಾ ಕಾರ್ಯಕ್ರಮ

ಮೊಗ್ರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೊಗ್ರು ಒಕ್ಕೂಟ ವತಿಯಿಂದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಅಂಗವಾಗಿ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂದಿರ ಉಂತಾನಾಜೆ ಇಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಭಜನಾ ಮಂದಿರದ ಒಳಾಂಗಣವನ್ನು ಹಾಗೂ ಹೊರಾಂಗಣದ ಸುತ್ತಲೂ ಬೆಳೆದಿದ್ದ ಕಳೆ ಗಿಡಗಳನ್ನು ತೆಗೆದು ಸ್ವಚ್ಛ

ಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಮೊಗ್ರು ಒಕ್ಕೂಟದ ಅಧ್ಯಕ್ಷರು , ಭಜನಾಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮ, ಶೌರ್ಯ ವಿಪತ್ತು ನಿರ್ವಹಣ ಘಟಕದ ಸ್ವಯಂ ಸೇವಕರಾದ ವಿನಯಚಂದ್ರ ಮೊಗ್ರು, ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ಮೊಗ್ರು ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿದರು.
ವರದಿ : ಚಂದ್ರಕಲಾ ಮೊಗ್ರು
ಸಂಯೋಜಕಿ ಕಣಿಯೂರು ಘಟಕ

ನಿಮ್ಮದೊಂದು ಉತ್ತರ