ಗ್ರಾಮಾಂತರ ಸುದ್ದಿ

ಕೊಯ್ಯರು ಹಟ್ಟಿಗೆ ಆಕಸ್ಮಿಕ ಬೆಂಕಿ 4 ಕ್ವಿಂಟಾಲ್ ಅಡಿಕೆ, 3 ಕ್ವಿಂಟಾಲ್ ರಬ್ಬರ್ ಬೆಂಕಿಗಾಹುತಿ

ಕೊಯ್ಯರು: ಕೊಯ್ಯರು ಗ್ರಾಮದ ಅರ್ತಲ್ಕೆ ನಿವಾಸಿ ಸೇಸಪ್ಪ ಮೋಗೇರ ಎಂಬವರ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಆ.2 ರಂದು ನಡೆದಿದೆ.

 

ಪರಿಣಾಮ ಮೇಲ್ಬಾವಣಿ ಸುಟ್ಟು ಹೋಗಿ, ದನ ಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಮನೆಯವರು ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಇದನ್ನು ಗಮನಿಸಿದ ಪಕ್ಕದ
ಮನೆಯವರು ಮನೆಯವರಿಗೆ ತಿಳಿಸಿದ್ದು ಮನೆ ಯಜಮಾನ ಸೇಸಪ್ಪ ಅವರು ಬಂದು ನೊಡಿದಾಗ ಹಟ್ಟಿಯು ಸಂಪೂರ್ಣವಾಗಿ ಸುಟ್ಟಿದೆ. ದನ ಕರುಗಳನ್ನು ತಕ್ಷಣ ರಕ್ಷಿಸಿದ್ದಾರೆ.ಹಟ್ಟಿಯಲ್ಲಿದ್ದ4 ಕ್ವಿಂಟಲ್ ಅಡಿಕೆ, 3 ಕ್ವಿಂಟಲ್ ರಬ್ಬರ್ ಸಂಪೂರ್ಣ ಸುಟ್ಟು ಕರಕಲಾಗಿ ಅಪಾರ ಹಾನಿಯಾಗಿದೆ

ನಿಮ್ಮದೊಂದು ಉತ್ತರ