ಗ್ರಾಮಾಂತರ ಸುದ್ದಿ

ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಗುರುಪೂರ್ಣಿಮೆ ಆಚರಣೆ.

ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಗುರುಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಗುರುಪೂರ್ಣಿಮೆಯ ಮಹತ್ವ ಸಾರುವ ಶ್ಲೋಕಗಳನ್ನು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಹಾಡಲಾಯಿತು.ಆ ಮೂಲಕ ಗುರುವಿಗೆ ಧನ್ಯವಾದ ಹೇಳಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಗುರುಪೂರ್ಣಿಮೆ ಆಚರಣೆ ಅಗತ್ಯದ ಕುರಿತು ಮಾತನಾಡಿದರು.ತದನಂತರ ಆಯಾಯ ತರಗತಿಗಳಲ್ಲಿ ತರಗತಿ ಅಧ್ಯಾಪಕರು ಗುರುವಿನ ಮಹತ್ವದ ಕುರಿತಾಗಿ,ಗುರುಪೂರ್ಣಿಮೆಯ ಮಹತ್ವ,ಅದರ ಪ್ರಾರಂಭ ಹಾಗೂ ಉದ್ದೇಶಗಳ ಕುರಿತು ಮಾತನಾಡಿದರು.ವಿದ್ಯಾರ್ಥಿಗಳಿಗೆ ಗುರುವಿನ ಮಹತ್ವ ಸಾರುವ ವಿಡಿಯೋ ತೋರಿಸಿ ಗುರುವಿನ ಸ್ಥಾನವನ್ನು ತಿಳಿಸಿಕೊಡಲಾಯಿತು.ವಿದ್ಯಾರ್ಥಿಗಳು ತಮ್ಮ ಆತ್ಮೀಯ ಹಾಗೂ ನೆಚ್ಚಿನ ಗುರುವಿಗೆ ನಲ್ಮೆಯ ಕಾಗದ ಬರೆಯುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.

ನಿಮ್ಮದೊಂದು ಉತ್ತರ