ಬೆಳ್ತಂಗಡಿ: ಬೆಳ್ತಂಗಡಿ- ಉಜಿರೆ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಎಂಬಲ್ಲಿ ಮೋರಿ ಸಹಿತ ರಸ್ತೆ ಕುಸಿತಗೊಂಡಿದೆ.ಈ ರಸ್ತೆಯಲ್ಲಿ ಧರ್ಮಸ್ಥಳ ಚಿಕ್ಕಮಗಳೂರು ಸೇರಿದಂತೆ ಭಾರೀ ವಾಹನಗಳ ಸಂಚಾರ ಇರುವುದಲ್ಲದೇ ಘನ ವಾಹನಗಳ ಸಂಚಾರವೂ ಅಧಿಕವಾಗಿದೆ .ಮಾಹಿತಿ ತಿಳಿದ ತಕ್ಷಣ ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದಾನ, ಉಪಾಧ್ಯಕ್ಷ ಗಣೇಶ್ ಆರ್,ಸದಸ್ಯರುಗಳಾದ ಪ್ರಸಾದ್ ಶೆಟ್ಟಿ ಎಣಿಂಜೆ, ದಿನೇಶ್ ಶೆಟ್ಟಿ, ಅರವಿಂದ ಕುಮಾರ್, ಹರಿಕೃಷ್ಣ, ಕಾರ್ಯದರ್ಶಿ ಯಶೋದರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಮುಂಜಾಗರೂಕತೆಗಾಗಿ ಬ್ಯಾರಿಕೇಡ್ ಅಳವಡಿಸಿ ವಾಹನಗಳು ಏಕಮುಖವಾಗಿ ಸಂಚಾರಿಸಲು ಕ್ರಮ ಕೈಗೊಂಡಿದ್ದಾರೆ.