ಗ್ರಾಮಾಂತರ ಸುದ್ದಿ

ತಣ್ಣೀರುಪಂತ ಅಳಕೆಯಲ್ಲಿ ಭೂಕುಸಿತ: 60 ಎಕ್ರೆ ಪ್ರದೇಶದ ಅಡಿಕೆ ತೋಟಕ್ಕೆ ಹಾನಿ

ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ಅಳಕೆ ಎಂಬಲ್ಲಿ ಉಂಟಾದ ಭೂ ಕುಸಿತದಿಂದ ಹರಿಯುವ ತೋಡಿನ ನೀರು ಸುಮಾರು 60 ಎಕ್ರೆ ಪ್ರದೇಶದ ಅಡಿಕೆ ತೋಟದಲ್ಲಿ ನಿಂತು ಅಡಿಕೆ ತೋಟಕ್ಕೆ ಹಾನಿ

ಸಂಭವಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಅಳಕೆಯಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ ಎಂದು ತಣ್ಣೀರುಪಂತ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಮಡಪ್ಪಾಡಿಯವರು ಮಾಹಿತಿ ನೀಡಿದ್ದಾರೆ. ಭೂ

ಕುಸಿತದಿಂದ ಮಣ್ಣು ತೋಡಿಗೆ ಬಿದ್ದಿದ್ದು, ಇದರಿಂದಾಗಿ ಪ್ರವಾಹ ತೋಟದಲ್ಲಿ ಹರಿದಿದೆ. ಸುಮಾರು 60ಎಕ್ರೆ ಅಡಿಕೆ ತೋಟದಲ್ಲಿ ನೀರು ನಿಂತಿದ್ದು, ಅಡಿಕೆ ಮರಗಳಿಗೆ ಹಾನಿ ತಟ್ಟುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಆಡಳಿತ ಭೇಟಿ ನೀಡಲಿದ್ದಾರೆ.

ನಿಮ್ಮದೊಂದು ಉತ್ತರ