ಗ್ರಾಮಾಂತರ ಸುದ್ದಿ

ಕಕ್ಕಿಂಜೆ ಹಾಲಾಜೆ ಮರ ಬಿದ್ದು ಸಂಚಾರಕ್ಕೆ ಅಸ್ತವ್ಯಸ್ತ

ಚಿಬಿದ್ರೆ : ಚಾರ್ಮಾಡಿ ಗ್ರಾ.ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಚಿಬಿದ್ರೆ ಗ್ರಾಮದ ಆಲಾಜೆಯ ಶ್ರೀನಿವಾಸ ಬೇಕರಿ ಸಮೀಪ ಗಾಳಿ ಮಳೆಗೆ ಮರವೊಂದು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ

ಜೂ.೨೨ರಂದು ಸಂಜೆ ನಡೆದಿದೆ. ಒಣಗಿದ ಧೂಪದ ಮರದ ಒಂದು ಕೊಂಬೆ ಮಳೆಗಾಳಿಗೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಉರುಳಿ ಬಿದ್ದಿತ್ತೇನ್ನಲಾಗಿದೆ. ಇದರಿಂದಾಗಿ ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೊಂಬೆ ಬಿದ್ದ ಪರಿಣಾಮ


ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್‌ನ ವಿದ್ಯುತ್ ಲೈನ್ ಹಾಗೂ ಖಾಸಗಿ ವಿದ್ಯುತ್ ಲೈನ್‌ಗೆ ಹಾನಿ ಉಂಟಾಗಿದೆ.
ಮೆಸ್ಕಾಂ, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಗ್ರಾ.ಪಂ ಅಧ್ಯಕ್ಷ ಪ್ರಸಾದ್ ಕೆ.ವಿ ಹಾಗೂ ಸ್ಥಳೀಯರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ರಸ್ತೆ ಬದಿಯಲ್ಲಿರುವ ಈ ಮರ ಒಣಗಿ ಹೋಗಿದ್ದು, ಅಪಾಯ ಸ್ಥಿತಿಯಲ್ಲಿದ್ದು, ಇದನ್ನು ನಾಳೆ ತೆರವುಗೊಳಿಸುವುದಾಗಿ ಗ್ರಾ.ಪಂ ಅಧ್ಯಕ್ಷ ಪ್ರಸಾದ್ ಕೆ.ವಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ