ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ಗ್ರಾಮ ಸಮಿತಿ ಕಣಿಯೂರು ವಲಯದ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಸರಕಾರಿ ಪ್ರೌಢಶಾಲೆ ಪದ್ಮುಂಜದಲ್ಲಿ ಜೂ.1ರಂದು ಆಚರಿಸಲಾಯಿತು.
ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ಪದ್ಮುಂಜ ಗ್ರಾಮ ಪಂಚಾಯತ್ ನಿಂದ ಪ್ರೌಢ ಶಾಲೆಯವರೆಗೆ ತಂಬಾಕು ವಿರೋಧಿ ಘೋಷಣೆ ಗಳ ಮೂಲಕ ಜಾಥಾದೊಂದಿಗೆ ಆಗಮಿಸಿ ಪ್ರೌಢ ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು.
ಅಧ್ಯಕ್ಷತೆಯನ್ನು ಪದ್ಮುಂಜ ಪ್ರೌಢ ಶಾಲೆ ಮುಖ್ಯೋಪಾಧ್ಯಯರಾದ ಶ್ರೀಮತಿ ಸುಮತಿ ರವರು ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಸಮಿತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ಆರ್ ರೈ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ, ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಒಳಗಾಗದೆ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು. ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ಯಶವಂತ್ ರವರು ಪ್ರಾಸ್ತವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಯೋಜನೆಯ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದಿನೇಶ್ ರವರು ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಸ್ವಾಸ್ಥ್ಯಸಮಾಜ ನಿರ್ಮಾಣ ಮಾಡಬೇಕು. ನಾವೆಲ್ಲರೂ ಇಂದಿನಿಂದಲೇ ದುಶ್ಚಟದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಪ್ರತಿಜ್ಞೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷರಾದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಮತಿರವರು ಕಾರ್ಯಕ್ರಮ ದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ,ಪದ್ಮುಂಜ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜ,ಕಣಿಯೂರು ವಲಯದ ಜನಜಾಗೃತಿ ಅಧ್ಯಕ್ಷರಾದ ರುಕ್ಮಯ್ಯ ಪೂಜಾರಿ, ಪ್ರಗತಿ ಬಂಧು ಒಕ್ಕೂಟಗಳ ಅಧ್ಯಕ್ಷರಾದ ರಮಾನಂದ , ಜನಜಾಗೃತಿ ತಾಲೂಕು ಸಮಿತಿಯ ಸದಸ್ಯರಾದ ರಾಜೀವ ರೈ, ಕಣಿಯೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಪ್ರಫುಲ್ಲ ಚಂದ್ರ ಅಡ್ಯಾoತಾಯ, ನವಜೀವನ ಸಮಿತಿಯ ಸ್ವಯಂ ಸೇವಕರಾದ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ಸ್ವಯಂ ಸೇವಕರು, ವಲಯದ ಸೇವಾಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕರಾದ ಶ್ರಿಮತಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿ, ಪ್ರಪುಲ್ಲಚಂದ್ರರವರು ಸ್ವಾಗತಿಸಿ ರಮಾನಂದರವರು ಧನ್ಯವಾದವಿತ್ತರು.