ಗ್ರಾಮಾಂತರ ಸುದ್ದಿ

ಮಧ್ವ ಯಕ್ಷಕೂಟದಿಂದ ತಾಳ ಮದ್ದಳೆ

ಪುಂಜಾಲಕಟ್ಟೆ: ಯಕ್ಷಗಾನದಿಂದ ಜ್ಞಾನದ ಉದ್ದೀಪನವಾಗುವ ಜತೆಗೆ ದೇವರ ಅಸ್ತಿತ್ವದ ಅರಿವು ಉಂಟಾಗುವುದು ಎಂದು ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಅರ್ಚಕ ಬಾಲಕೃಷ್ಣ ಅರಿಮಣಿತ್ತಾಯ ಹೇಳಿದರು.


ಅವರು ಪುಂಜಾಲಕಟ್ಟೆ ಬಸವನಗುಡಿ ಶ್ರೀ ವಿಶ್ವಕರ್ಮ ಸಭಾಂಗಣದಲ್ಲಿ ಮಧ್ವ  ಯಕ್ಷಕೂಟದ ವತಿಯಿಂದ ನಡೆದ ತಾಳ ಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಾರೆಂಕಿ ಶ್ರೀ ಮಹಿಷರ್ಮನಿ ದೇವಸ್ಥಾ ನದ ಪ್ರಧಾನ ಅರ್ಚಕ ಶ್ರೀಧರ ಭಟ್ ಮಾತನಾಡಿ, ಕಲಿಯುಗದಲ್ಲಿ ಅಜ್ಞಾನದ ಅಂಧಕಾರದಲ್ಲಿ ಅಧರ್ಮದ ದಾಳಿಗೊಳಗಾದಾಗ ಅಧ:ಪತನಕ್ಕೊಳಗಾಗದಿರಲು ದೇವರ ನಾಮಸ್ಮರಣೆಯ ಮಹತ್ವವನ್ನು ಶನಿ ಮಹಾತ್ಮ ಕಥೆ ತಿಳಿಸುವುದು ಎಂದು ಅವರು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಗಿರಿಯಪ್ಪ ಎಂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳ್ಳಿ ಪದಕ ಪುರಸ್ಕೃತ ಚಾಲಕ ಜಯಪ್ರಕಾಶ್ ರಾವ್ ಕಾವಳಕಟ್ಟೆ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಕೋಂಕಡ್ಡ, ಕಾವಳಪಡೂರು ಗ್ರಾ.ಪಂ. ಮಾಜಿ ಸದಸ್ಯ ಸದಾಶಿವ ಅಮೀನ್ ಮಧ್ವ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಹಿರಿಯ ಅರ್ಥಧಾರಿ ತಿಮ್ಮಪ್ಪ ಶೆಟ್ಟಿ ಪಾತಿಲ, ಯಕ್ಷವಾಸ್ಯಮ್ ಕಾರಿಂಜ ಇದರ ಸಂಚಾಲಕಿ ಸಾಯಿ ಸುಮಾ ನಾವಡ ಕಾರಿಂಜ, ಯಕ್ಷಕೂಟ ಮಧ್ವ ಇದರ ಕಾರ್ಯಕಾರಿ ಸದಸ್ಯರಾದ ನಾರಾಯಣ ಶೆಟ್ಟಿ, ಯುವರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಶ್ರೀ ಶನೀಶ್ವರ ಮಹಾತ್ಮ ಯಕ್ಷಗಾನ ತಾಳಮದ್ದಳೆ ನಡೆಯಿತು.

ನಿಮ್ಮದೊಂದು ಉತ್ತರ