ಗ್ರಾಮಾಂತರ ಸುದ್ದಿ

ಶೌರ್ಯ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಮಾಸಿಕ ಸಭೆ ಹಾಗೂ ನೂತನ ಸ್ವಯಂ ಸೇವಕರ ಸೇರ್ಪಡೆ

ಕಣಿಯೂರು : ಶೌರ್ಯ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಮಾಸಿಕ ಸಭೆ ಹಾಗೂ ನೂತನ ಸ್ವಯಂ ಸೇವಕರ ಸೇರ್ಪಡೆ ಸಭೆಯನ್ನು ಮೇ 29ರಂದು ಕೊರಿಂಜ ಸಭಾ ಭವನದಲ್ಲಿ ನಡೆಸಲಾಯಿತು.ಈ ಸಭೆಗೆ ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಜೈವಂತ್ ಪಟಗಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾಧಿಕಾರಿ ಯಶವಂತ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮ ಹಾಗೂ ಕಣಿಯೂರು ಘಟಕದ ಎಲ್ಲಾ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಹೊಸದಾಗಿ 10 ಜನ ಸ್ವಯಂ ಸೇವಕರನ್ನು ಘಟಕಕ್ಕೆ ಸೇರ್ಪಡೆ ಮಾಡಲಾಯಿತು. ಹಾಗೂ ನೂತನ ಸಂಯೋಜಕರಾಗಿ ಅಶೋಕ್ ಇಳಂತಿಲ, ಹಾಗೂ ಘಟಕ ಪ್ರತಿನಿಧಿ ಯಾಗಿ ದಿನೇಶ್ ಖಂಡಿಗ ಇವರನ್ನು ಆಯ್ಕೆ ಮಾಡಲಾಯಿತು.
ಜೈವಂತ್ ರವರು ಘಟಕದ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಯೋಜಕಿ ಚಂದ್ರಕಲಾ ಸ್ವಾಗತಿಸಿ, ಧನ್ಯವಾದವಿತ್ತರು.
ವರದಿ :ಚಂದ್ರಕಲಾ
ಸಂಯೋಜಕಿ ಕಣಿಯೂರು ಘಟಕ

ನಿಮ್ಮದೊಂದು ಉತ್ತರ