ಗ್ರಾಮಾಂತರ ಸುದ್ದಿ

ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ತನಿಖಾ ವಿಭಾಗದ ಎಸ್.ಐ.ಯಾಗಿ ಜಾನಕಿ ಕೆ.

ಬೆಳ್ತಂಗಡಿ: ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯ ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ತನಿಖಾ ವಿಭಾಗದ ಎಸ್.ಐ.ಯಾಗಿ ಜಾನಕಿ ಕೆ. ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಎಸ್.ಐ.ಯಾಗಿದ್ದ ಇವರು ಬಳಿಕ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಐಡಿ ಅರಣ್ಯ ಸಂಚಾರಿದಳದ ಎಸ್.ಐ.ಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಹಲವು ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚಿ ಗಮನ ಸೆಳೆದಿದ್ದರು. ಅಲ್ಲದೆ, ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯ ಪ್ರಯುಕ್ತ ಸುದ್ದಿ ಸಮೂಹ ಸಂಸ್ಥೆಯು ಪ್ರತೀ ಇಲಾಖೆಯ ಉತ್ತಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆಯ್ಕೆಗಾಗಿ ನಡೆಸಿದ್ದ ಆನ್ಲೈನ್ ಓಟಿಂಗ್ ನಲ್ಲಿ ಉತ್ತಮ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.‌ ಐದು ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡು ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಐಡಿ ಅರಣ್ಯ ಸಂಚಾರಿ ದಳವನ್ನು ಸರಕಾರ ಸ್ಥಳಾಂತರಗೊಳಿಸಿ ಆದೇಶಿಸಿದ ನಂತರ ಮಂಗಳೂರು ಡಿ.ಸಿ.ಆರ್.ಬಿ. ಸಬ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದ ಜಾನಕಿರವರು ಇದೀಗ ಪೂಂಜಾಲಕಟ್ಟೆ ಠಾಣಾ ತನಿಖಾ ವಿಭಾಗದ ಎಸ್.ಐ.ಯಾಗಿ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದವರಾಗಿರುವ ಜಾನಕಿರವರು ರಾಷ್ಟ್ರಮಟ್ಟದ ಅತ್ಲೆಟಿಕ್ ಕ್ರೀಡಾಪಟುವಾಗಿದ್ದು ಪತಿ, ಕೋಟೆಕಾರು ಬೋವಿ ಸರಕಾರಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕ ದೇವಪ್ಪ ಗೌಡ, ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಮಗಳು ಪೂಜಾ ಮತ್ತು ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಪುತ್ರ ಆಕಾಶ್ ಅವರೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ.

ನಿಮ್ಮದೊಂದು ಉತ್ತರ