ಗ್ರಾಮಾಂತರ ಸುದ್ದಿ

ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆ* : *ಶಾಲಾ ಪ್ರಾರಂಭೋತ್ಸವ*

*ಶಾಸಕ ಹರೀಶ್   ಪೂಂಜ ರಿಂದ ಚಾಲನೆ*:*ರಾಜ್ಯಕ್ಕೆ ಮಾದರಿ ಶಾಲೆಯಾಗಿಸುವ ಚಿಂತನೆ*

ಪುಂಜಾಲಕಟ್ಟೆ : ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ  ಶಾಲಾ ಪ್ರಾರಂಭೋತ್ಸವ ಮೇ.16ರಂದು  ವಿಜೃಂಭಣೆಯಿಂದ ಜರಗಿತು.


ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಶಾಲಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ  ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ತರಗತಿವರೆಗೆ ಗುಣ ಮಟ್ಟದ ಶಿಕ್ಷಣ ನೀಡಲು ಸಕಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.


ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು  ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಎಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಉತ್ತಮ ಯೋಜನೆಗಳನ್ನು ರೂಪಿಸಿದೆ. ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಉನ್ನತ ವ್ಯಕ್ತಿತ್ವ ಗಳಿಸಲು ಸಾಧ್ಯ ಎಂದರು.  ಬೆಳ್ತಂಗಡಿ ಶಿಕ್ಷಣಾಧಿಕಾರಿ ವಿರೂಪಾಕ್ಷ ಅವರು   ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಮಡಂತ್ಯಾರು ಗ್ರಾ.ಪಂ.

ಅಧ್ಯಕ್ಷೆ ಶಶಿಪ್ರಭಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಂಜಾಲಕಟ್ಟೆ ಪಬ್ಲಿಕ್ ಸ್ಕೂಲ್ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪೋಷಕರು ಸದುಪಯೋಗ ಪಡಕೊಳ್ಳಬೇಕು ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ.ಪೂ ಕಾಲೇಜು ಪ್ರಾಂಶುಪಾಲೆ ಸರೋಜಿನಿ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉದಯ ಕುಮಾರ್ ಜೈನ್, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಉಮೇಶ್ ಸುವರ್ಣ, ಹರೀಶ್,

ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಭಾರತಿ, ಯಶೋಧಾ, ಸೋಮಯ್ಯ, ಚಂದ್ರಾ, ಚೇತನಾ, ದಿವಾಕರ ಶೆಟ್ಟಿ, ಗೀತಾ, ಮಹಮ್ಮದ್ ರಫೀಕ್,ಪ್ರಸಾದ್, ಸುಮಿತ್ರಾ, ಸಿಆರ್‌ಪಿ ಚೇತನಾ,ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು. ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ಸರಕಾರದಿಂದ ಕೊಡಮಾಡಿದ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಸ್ಮಾರ್ಟ್

ಕಪ್ಯೂಟರ್ ಪರದೆಯನ್ನು ಶಿಕ್ಷಣಾಧಿಕಾರಿ ಉದ್ಘಾಟಿಸಿದರು. ಬ್ಯಾಂಡ್, ಮೆರವಣಿಗೆ ಮೂಲಕ ಶಾಸಕರನ್ನು ಸ್ವಾಗತಿಸಲಾಯಿತು.  ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಕೆ. ಅವರು ಸ್ವಾಗತಿಸಿದರು.ಶಿಕ್ಷಕ ಧರಣೇಂದ್ರ ಜೈನ್ ಪಠ್ಯ ಪುಸ್ತಕ ವಿತರಣ ಮಾಹಿತಿ ನೀಡಿದರು. ಶಿಕ್ಷಕಿ ಬೇಬಿ ಕೋಸೆಸ್ ಸಿಕ್ವೆರಾ ವಂದಿಸಿದರು.ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮದೊಂದು ಉತ್ತರ