ಗ್ರಾಮಾಂತರ ಸುದ್ದಿ

ಲಾಯಿಲದಲ್ಲಿ ಬಾವಿಗೆ ಬಿದ್ದ ಹಸು – ಅಗ್ನಿಶಾಮಕ ದಳದಿಂದ ರಕ್ಷಣೆ

ಬೆಳ್ತಂಗಡಿ: ಲಾಯಿಲ ಗ್ರಾಮದ ಕುಂಡಡ್ಕ ಎಂಬಲ್ಲಿ ದನವೊಂದು ಅಂಗಳದಲ್ಲಿದ್ದ ಬಾವಿಗೆ ಬಿದ್ದ ಘಟನೆ ನಡೆದಿದೆ. ಕುಂಡಡ್ಕ ತೇಜ್ ಕಿರಣ್ ರಾವ್ ಎಂಬವರ ಮನೆಯ ಅಂಗಳದಲ್ಲಿ ಸುಮಾರು 30 ಅಡಿ ಆಳದ ಅವರಣ ಗೋಡೆಯಿರುವ ಬಾವಿಗೆ ಬಿದಿದ್ದು ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ .


ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು ದನವನ್ನು ಬಾವಿಯಿಂದ ಎತ್ತಿ ರಕ್ಷಿಸಿದ್ದಾರೆ.ಬಾವಿಯಲ್ಲಿ ನೀರು ಇದ್ದುದರಿಂದ ದನಕ್ಕೆ ಯಾವುದೇ ರೀತಿಯ ಅಪಾಯವಾಗಿಲ್ಲ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಾದ ಠಾಣಾಧಿಕಾರಿ ಕೆ. ವಿಶ್ವನಾಥ್ ಪೂಜಾರಿ, ಚಾಲಕ ಲಿಂಗರಾಜ್ ಲಮಾಣಿ, ಮಂಗಳದಾಸ್ ನಾಯ್ಕ, ಮಹಮ್ಮದ್ ಜಂಬಗಿ, ವಿನೋದ್ ರಾಜ್ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಸೇರಿದಂತೆ ಸ್ಥಳೀಯರು ಸಹಕರಿಸಿದರು.

 

ನಿಮ್ಮದೊಂದು ಉತ್ತರ