ಗ್ರಾಮಾಂತರ ಸುದ್ದಿ

ಶ್ರೀ ಕ್ಷೇತ್ರ ಮಂಚಕಲ್ಲು ದೈವ ಸನ್ನಿಧಿಯಲ್ಲಿ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಕಾಯ೯ಕ್ರಮದ ವಿಜ್ಞಾಪನ ಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

ಗುರುವಾಯನಕೆರೆ: ಕುವೆಟ್ಟು ಗ್ರಾಮದ ಶ್ರೀ ಕ್ಷೇತ್ರ ಮಂಚಕಲ್ಲು ದೈವ ಸನ್ನಿಧಿ ಶಾರದ ನಗರ ಗುರುವಾಯನಕೆರೆ ಇದರ ಪುನರ್ ಪ್ರತಿಷ್ಠೆ, ಕಲಶಾಭಿಷೇಕ  ಕಾಯ೯ಕ್ರಮದ  ವಿಜ್ಞಾಪನ ಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮೇ 7 ರಂದು ಶಾರದ ಮಂಟಪದಲ್ಲಿ ಜರುಗಿತು.

ಶ್ರೀ ಕ್ಷೇತ್ರ ಮಂಚಕಲ್ಲು ದೈವ ಸನ್ನಿಧಿ ಸಮಿತಿ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ, ಬರೋಡ, ನವಶಕ್ತಿ ಇವರು ವಿಜ್ಞಾಪನ ಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನೇರವೇರಿಸಿ, ಮಾತನಾಡಿ, ಮಂಚಕಲ್ಲಿನಲ್ಲಿ ನಮ್ಮ ಹಿರಿಯರು ಈ ದೈವಗಳನ್ನು ಆರಾಧಿಸಿಕೊಂಡು ಬಂದಿದ್ದರು. ಇದನ್ನು ಜೀಣೋ೯ದ್ಧಾರ ಮಾಡವ ಪುಣ್ಯ ಕಾಯ೯ ನಮಗೆ ದೊರಕಿದೆ. ಇದು ದೈವದ ಪ್ರೇರಣೆಯಾಗಿದೆ ಯಾವುದೇ ಆಡಂಬರ ವಿಲ್ಲದೆ ಸಾಂಪ್ರಾದಾಯಿಕವಾಗಿ ಕಾಯ೯ಕ್ರಮ ಮಾಡುವ ಇದಕ್ಕೆ ಭಕ್ತರ ಪೂಣ೯ ಸಹಕಾರ ಬೇಕು ಎಂದರು.

 

ಅಧ್ಯಕ್ಷ ತೆಯನ್ನು ಸಮಿತಿ ಅಧ್ಯಕ್ಷ
ಧನಂಜಯ ರಾವ್ ರಂಗಬೆಟ್ಟು ವಹಿಸಿ, ದೈವಗಳ ಈ ಪ್ರತಿಷ್ಠಾ ಕಾಯ೯ಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು.
ಕಾಯ೯ಕ್ರಮದಲ್ಲಿ ಉಪಾಧ್ಯಕ್ಷರುಗಳಾದ
ಪುರಂದರ ಶೆಟ್ಟಿ, ಪಾಡ್ಯಾರು ಮತ್ತು ಕೃಷ್ಣಾನಂದ ಕುಲಾಲ್, ಮಾಕೆರೆಕೆರೆ, ಪ್ರಧಾನ ಕಾರ್ಯದರ್ಶಿ, ಮಂಜುನಾಥ್ ಕುಂಬ್ಳೆ ,ಜತೆ ಕಾರ್ಯದರ್ಶಿ ವಿಠಲ್ ಶೆಟ್ಟಿ, ಪಾಡ್ಯಾರು, ಕೋಶಾಧಿಕಾರಿ ರಮಾನಂದ ಸಾಲ್ಯಾನ್, ಶ್ರೀ ಗುರು, ಗೌರವ ಸಲಹೆಗಾರರಾದ ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರಬೀಡು, ತಾ.ಪಂ ಮಾಜಿ ಸದಸ್ಯ ಗೋಪಿನಾಥ್ ‌ನಾಯಕ್, ಹೇಮಂತ್ ರಾವ್ ಯಡೂ೯ರು, ಹರಿದಾಸ್ ಕೆ. ಮೆಸ್ಕಾಂ, ಸ್ಥಳೀಯ ರಾದ ಯೋಗೀಶ್ ಆಚಾರ್ಯ, ಹರೀಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ‌ ಸಂಚಾಲಕರಾದ ಆನಂದ ಕೋಟ್ಯಾನ್ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

ನಿಮ್ಮದೊಂದು ಉತ್ತರ