ಲಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ, ಗುರುವಾಯನಕೆರೆ ಇದರ ವಾರ್ಷಿಕ ಮಹಾಸಭೆಯು ಮೇ.1ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಇವರ ಅದ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ವರದಿ ವಾಚನ, ಬೈಲಾ ತಿದ್ದುಪಡಿ, ಜಮಾ ಖರ್ಚು ಮಂಡಿಸಲಾಯಿತು. ನಂತರ ಮುಂದಿನ ಎರಡು ವರ್ಷಗಳವರೆಗಿನ ನೂತನ 15 ಜನ ನಿರ್ದೇಶಕರುಗಳ ಆಯ್ಕೆ ನಡೆಯಿತು. ಮಹಾಸಭೆಯ ನಂತರ ಸಮಿತಿಯ ನಿರ್ದೇಶಕರ ಸಭೆ ನಡೆದು ಮುಂದಿನ ಅಧ್ಯಕ್ಷರಾಗಿ ಸವಾ೯ನುಮತದಿಂದ ಎರಡನೇ ಭಾರಿಗೆ ಹರೀಶ್ ಕಾರಿಂಜ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹೆಚ್ ಪದ್ಮಕುಮಾರ್ ಬೆಳ್ತಂಗಡಿ, ಕಾರ್ಯದರ್ಶಿಯಾಗಿ ಯತೀಶ್ ಸಿರಿಮಜಲು, ಕೋಶಾಧಿಕಾರಿಯಾಗಿ ಶ್ರೀಮತಿ ಲಲಿತ ಕಕ್ಕಿಂಜೆ, ಜೊತೆಕಾರ್ಯದರ್ಶಿಯಾಗಿ ದಿನೇಶ್ ಮೂಲ್ಯ ಮಾಲಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಲಾಯಿಲ , ಹಾಗೂ ನಿರ್ದೇಶಕರುಗಳಾಗಿ, ಉಮೇಶ್ ಕುಲಾಲ್ ಗುರುವಾಯನಕೆರೆ, ಹರೀಶ್ ಮೂಲ್ಯ ನಾರಾವಿ, ಸಂತೋಷ್ ಪಿ .ಪರಾರಿ, ಉದಯ ಬಿ .ಕೆ ಬಂದಾರು, ಮಿಥುನ್ ಕುಲಾಲ್ ಅಲೆಕ್ಕಿ, ಲೋಕೇಶ್ ಕುಲಾಲ್ ಗುರುವಾಯನಕೆರೆ, ವಸಂತ ಕುಲಾಲ್ ಬೆಳ್ತಂಗಡಿ, ಶಾಂತಪ್ಪ ಮೂಲ್ಯ ಕಲಿಕಾ, ಹರೀಶ್ಚಂದ್ರ ಕುಲಾಲ್ ಪಾಂಡೇಶ್ವರ ಆಯ್ಕೆ ಆಗಿರುತ್ತಾರೆ.