ಧರ್ಮಸ್ಥಳದಲ್ಲಿ ಇಂದು ರಾತ್ರಿ ಸುರಿದ
ಭೀಕರ ಮಳೆಗೆ ಧರ್ಮಸ್ಥಳದ ಕಿರು
ಸೇತುವೆಯಲ್ಲಿ ನೀರು ಉಕ್ಕಿಹರಿದು
ರಸ್ತೆಯಲ್ಲಿ ಕೃತಕ ನೆರೆ ಉಂಟಾ ಯಿತು.
ನೀರಿನಿಂದ ಆವೃತಗೊಂಡ ರಸ್ತೆಯಲ್ಲಿ
ಸಂಚರಿಸ ಲು ವಾಹನ ಸವಾರರು
ಹರಸಾಹಸ ಪಡುವಂತಾ ಯಿತು.
ಧಾರಾಕಾರ ಮಳೆ ಸುರಿದ ಪರಿಣಾಮ
ಕಿರುಸೇತುವೆಯಲ್ಲಿ ಮರದ ದಿಮ್ಮಿಗಳು
ತೇಲಿ ಬಂದು ನೀರಿನ ಸುಸೂತ್ರ ಹರಿವಿಗೆ
ಅಡ್ಡಿಯಾಗಿ ದ್ದು, ಒಮ್ಮಿಂದೊಮ್ಮೆಲೆ
ಜಲಪ್ರವಾಹ ಕಿರು ಸೇತುವೆಯ ಮೇಲೆಯೇ
ಉಕ್ಕಿಹರಿದು ಈ ಕೃತಕ ನೆರೆ ಸಂಭವಿಸಿದೆ.