ಪುಂಜಾಲಕಟ್ಟೆ: ಪುರಾಣ ಪುಣ್ಯ ಕಥಾಭಾಗಗಳ ಪ್ರಚಾರಕ್ಕೆ ಪೂರಕವಾದ ಯಕ್ಷಗಾನಕ್ಕೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ನಿವೃತ್ತ ಸೈನಿಕ ಕಾಂತಪ್ಪ ಗೌಡ ಹಟ್ಟತ್ತೋಡಿ ಹೇಳಿದರು.
ಅವರು ಅ.10ರಂದು ಮಡಂತ್ಯಾರು ಶ್ರೀ ಗಣಪತಿಮಂಟಪ ಸಭಾಂಗಣದಲ್ಲಿ ಮಧ್ವ ಯಕ್ಷಕೂಟದ ವತಿಯಿಂದ ನಡೆದ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಾರೆಂಕಿ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಪ್ರ.ಅರ್ಚಕ ಶ್ರೀಧರ ರಾವ್ ಪೇಜಾವರ, ಪ್ರಗತಿಪರ ಕೃಷಿಕ ವಿಶ್ವನಾಥ ಶೆಟ್ಟಿ ಮೂಡಾಯೂರು, ಶ್ರೀ ಗಣಪತಿ ಮಂಟಪದ ಅಧ್ಯಕ್ಷ ಹರೀಶ್ ಶೆಟ್ಟಿ ಪದೆಂಜಿಲ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ, ಸದಸ್ಯ ವಿಶ್ವನಾಥ ಪೂಜಾರಿ, ಕಾರಿಂಜ ಯಕ್ಷವಾಸ್ಯಮ್ ಇದರ ಸಂಚಾಲಕಿ ಸಾಯಿಸುಮಾ ನಾವಡ, ಹಿರಿಯ ಅರ್ಥಧಾರಿ ತಿಮ್ಮಪ್ಪ ಶೆಟ್ಟಿ ಪಾತಿಲ, ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪ ಪ್ರಾಂಶುಪಾಲ ಉದಯ ಕುಮಾರ್‌ಬಿ.ಜೈನ್,ಮಹಾವೀರ ಮೆಡಿಕಲ್ಸ್ ಮಾಲಕ ಉದಯ ಕುಮಾರ್ ಜೈನ್,ಉದ್ಯಮಿಗಳಾದ ಕೃಷ್ಣ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಯಕ್ಷ ಕೂಟ ಸಮಿತಿ ಪದಾಽಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.