ಗ್ರಾಮಾಂತರ ಸುದ್ದಿ

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು : ಅ.15- 11ನೇ ಬೆಳ್ತಂಗಡಿ ಶಾಖೆಯ ಉದ್ಘಾಟನೆ

ಬೆಳ್ತಂಡಿ: ದಕ್ಷಿಣಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ 11ನೇ ಶಾಖೆಯು ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿ ಇರುವ ವಿಘೇಶ   ಸಿಟಿ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಅ.15ರಂದು ಉದ್ಘಾಟನೆಗೊಳ್ಳಲಿದೆ ಎಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಪುತ್ತೂರು ಇದರ ಅಧ್ಯಕ್ಷರಾದ ಭಾಸ್ಕರ ಎಂ. ಪೆರುವಾಯಿ ಹೇಳಿದರು.


ಅವರು ಅ.12ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,
1958ನೇ ಇಸವಿಯಲ್ಲಿ ಗ್ರಾಮೀಣ ಕುಂಬಾರಿಕೆ ಮತ್ತು ಗುಡಿ ಕೈಗಾರಿಕೆಯ ಅಭಿವೃದ್ಧಿಗಾಗಿ ಗ್ರಾಮೀಣ ಕುಂಬಾರ ಕುಶಲ ಕರ್ಮಿಗಳನ್ನು ಸದಸ್ಯರನ್ನಾಗಿಸಿ ಪುತ್ತೂರು ತಾಲೂಕಿನ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳಿಗೆ ಕಾರ್ಯವ್ಯಾಪ್ತಿಯನ್ನು ಹೊಂದಿ ಅಂದಿನ ಮದ್ರಾಸ್ ಸರಕಾರದಡಿಯಲ್ಲಿ ರಚಿತವಾದ ಸಹಕಾರ ಸಂಘವು ಇಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲಾ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಒಟ್ಟು10 ಕಡೆಗಳಲ್ಲಿ ಬ್ಯಾಂಕಿಂಗ್ ಮತ್ತು ಮಾರಾಟ ಮಳಿಗೆಗಳು, ಪುತ್ತೂರು ಮತ್ತು ಬಿ.ಸಿ ರೋಡಿನಲ್ಲಿ ಕುಂಬಾರಿಕೆ ಪ್ರದರ್ಶನ ಮಳಿಗೆ ಮತ್ತು ಒಂದು ಕುಂಬಾರಿಕೆ ಉತ್ಪಾದನಾ ತರಬೇತಿ ಕೇಂದ್ರದ ಮೂಲಕ ಸದಸ್ಯರಿಗೆ ಸಹಕಾರವನ್ನು ನೀಡುತ್ತಿರುವ ರಾಜ್ಯದ ಏಕೈಕ ಸಹಕಾರ ಸಂಘವಾಗಿದೆ ಎಂದರು.
ಬೆಳ್ತಂಗಡಿಯಲ್ಲಿ ಆರಂಭಗೊಳ್ಳಲಿರುವ ಸಂಘದ 11ನೇ ಶಾಖೆಯನ್ನು ಶಾಸಕರಾದ ಹರೀಶ್
ಪೂ೦ಜಾರವರು ಉದ್ಘಾಟಿಸಲಿರುವರು. ಭದ್ರತಾ ಕೊಠಡಿಯನ್ನು ಮನಾಪ ಆರೋಗ್ಯ ವಿಭಾಗದ ಮೆಡಿಕಲ್ಆಫೀಸರ್ ಡಾ. ಅಣ್ಣಯ್ಯ ಕುಲಾಲ್ ಉಳ್ಳೂರು, ಗಣಕಯಂತ್ರವನ್ನು ದ. ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಇವರು
ಉದ್ಘಾ ಟಿಸಲಿರುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಜನಿ ಕುಡ್ವ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸ೦ಘದ ಅಧ್ಯಕ್ಷರಾದ ಹರೀಶ್ ಕಾರಿಂಜ, ವಿಫ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಮಾಲಕರಾದ ರವಿಯವರು ಭಾಗವಹಿಸಲಿರುವರು ಎಂದು ತಿಳಿಸಿದರು.
ಸಹಕಾರ ಸಂಘವು ಗ್ರಾಮೀಣ ಜನರ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಕಾರ್ಯಯೋಜನೆಯನ್ನು ಹಾಕಿ ದುಡಿಯುತ್ತಿದ್ದು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.ಬೆಳ್ತಂಗಡಿ ಶಾಖೆಯ ಪ್ರಯುಕ್ತ ಕಡಿಮೆ ಬಡ್ಡಿದರದಲ್ಲಿ ಸಾಲ ಯೋಜನೆಗಳನ್ನು ಘೋಷಿಸಲಾಗಿದೆ. ಈ ಭಾಗದ ಸದಸ್ಯರು
ಇದರ ಪ್ರಯೋಜನವನ್ನು ಪಡೆಯುವಂತೆ ಅವರು ಈ ಸಂದರ್ಭ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ನಿರ್ದೇಶಕರುಗಳಾದ ಹೆಚ್. ಪದ್ಮಕುಮಾರ್, ಗಣೇಶ್ ಪಿ. ಉಪ್ಪಿನಂಗಡಿ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಉಪಸ್ಥಿತಿ ಇದ್ದರು.

ನಿಮ್ಮದೊಂದು ಉತ್ತರ