ಬೆಳ್ತಂಗಡಿ: ಸೋಮವಾರ ಸಂಜೆ ವೇಳೆ ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಎದುರಿನ ನಿವಾಸಿ ಅಬ್ದುಲ್ ರಶೀದ್ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್
ಉಪಕರಣಗಳಿಗೆ ಭಾರೀ ಹಾನಿಯಾಗಿದೆ.
ವಿದ್ಯುತ್ ಮೀಟರ್, ವಯರಿಂಗ್, ಸ್ವಿಚ್ ಬೋರ್ಡ್ ಸಿಡಿಲಾಘಾತಕ್ಕೆ ಕಿತ್ತು ಬಂದಿದೆ. ವರಯಿಂಗ್, ಇನ್ವರ್ಟರ್, ಟಿ.ವಿ, ಫ್ರಿಡ್ಜ್ ಎಲ್ಲದಕ್ಕೂ ಹಾನಿಯಾಗಿದ್ದು, ಬಲ್ಬುಗಳು ಮತ್ತು ಉಪಕರಣಗಳು ಸಿಡಿದು ಪುಡಿ ಪುಡಿಯಾಗಿದೆ.
ಘಟನೆಯ ವೇಳೆ ಮನೆಯಲ್ಲಿ ಅಬ್ದುಲ್ ರಶೀದ್ ಅವರ ತಂದೆ, ತಾಯಿ, ಅಕ್ಕ, ಬಾವ ಮತ್ತು ಅಕ್ಕನ ಸಣ್ಣ ಮಗು ಇವರೆಲ್ಲ ಇದ್ದರಾದರೂ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕೆಲವು ನಿಮಿಷಗಳ ಅಂತರದಲ್ಲಿ ಎರಡು ಸುತ್ತಿನಲ್ಲಿ
ಇಲ್ಲಿಗೆ ಸಿಡಿಲು ಬಡಿದಿದೆ. ಈ ವೇಳೆ ಬೆಂಕಿಯ ಉಂಡೆಯಂತೆ ವಿದ್ಯುತ್ ಪ್ರವಹಿಸಿ ಬಂದಿರುವದು ಅವರಿಗೆ ಕಂಡಿದೆ ಎಂದು ಮನೆಯವರು ತಿಳಿಸಿದ್ದಾರೆ.ಘಟನೆ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತ್ ಗೆ ಮತ್ತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ.