ಗ್ರಾಮಾಂತರ ಸುದ್ದಿ

ಟೈಲರ್‍ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಸಭೆ

ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರ ಸಮಿತಿಯ 2020-21ನೇ ಸಾಲಿನ ಸಮಾನ್ಯ ಸಭೆ ಅ.3ರಂದು ಬೆಳ್ತಂಗಡಿ ಮಂಜುಶ್ರೀ ಜೇಸಿ ಭವನದಲ್ಲಿ ನಡೆಯಿತು


ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಾಘವ ಪುತ್ರನ್ ಅಧ್ಯಕ್ಷತೆ ವಹಿಸಿ ಮಾತನಾಡಿ,`ಉದ್ಯಮ: ಸಾಹಸಂ ಧೈರ್ಯ, ಬುದ್ಧಿ ಶಕ್ತಿ ಪರಾಕ್ರಮಹ ಷಡತೇ ಯತ್ರ ವಿದ್ಯಂತೆ ತತ್ರ ದೇವ ಸಹಾಯಕಮ್’ ಎನ್ನುವ ಶ್ಲೋಕದೊಂದಿಗೆ ಯಾರು ಪ್ರಾಮಾಣಿಕವಾಗಿ ಬುದ್ದಿಯನ್ನು ಉಪಯೋಗಿಸಿ ಕೆಲಸ ಮಾತುತ್ತಾರೋ ಅವರಿಗೆ ದೇವರು ಅದರ ಪ್ರತಿಫಲವನ್ನು ನೀಡುತ್ತಾನೆ. ಕೋಳಿ ಬೆಳಗ್ಗಿನ ಸಮಯವನ್ನು ತನ್ನಿಂತಾನೆ ತಿಳಿದು ಕೊಂಡು ಕೂಗುತ್ತದೆಯೋ ಹಾಗೇ ನಾವುಗಳು ಕೂಡಾ ಒಳ್ಳೆಯ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಸಂಘಟನೆಗಾಗಿ ಕೆಲಸ ಮಾಡುವ ಎಂದು ತಿಳಿಸಿದರು.


ಜಿಲ್ಲಾ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡರರು ಪ್ರಸ್ತಾವಿಕವಾಗಿ ಮಾತನಾಡಿ ಟೈಲರ್‍ಸ್ ಸಂಘದ ಬಗ್ಗೆ ಸವಿಸ್ತರವಾಗಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಮಾರ್ ಕ್ಷೇತ್ರ ಸಮಿತಿಯ ವರದಿಯನ್ನು ವಾಚಿಸಿದರು. ಉಜಿರೆ, ಕೊಕ್ಕಡ, ಕಕ್ಕಿಂಜೆ, ನಾರಾವಿ, ಬೆಳ್ತಂಗಡಿ, ಗೇರುಕಟ್ಟೆ, ವೇಣೂರು ವಲಯಗಳ ವರದಿಯನ್ನು ಮಂಡಿಸಲಾಯಿತು. ಕೋಶಾಧಿಕಾರಿ ಜಯ ಚಿದಾನಂದ್, ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ, ಜಿಲ್ಲಾ ಸಮಿತಿಯ ಸದಸ್ಯರಾದ ವಸಂತ ಎನ್, ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ವಸಂತ ಸುವರ್ಣ, ವಿಠಲ ಹಾಗೂ ವಲಯ ಸಮಿತಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಪ್ರಶಾಂತ್ ಕೊಕ್ಕಡ ಸ್ವಾಗತಿಸಿದರು.ಜಿ.ವಿ ಹರೀಶ್ ಸವಣಾಲು ಕಾರ್ಯಕ್ರಮ ನಿರೂಪಿಸಿದರು. ಜಯ ಚಿದಾನಂದ ವಂದಿಸಿದರು.

ನಿಮ್ಮದೊಂದು ಉತ್ತರ