ಗ್ರಾಮಾಂತರ ಸುದ್ದಿ

ತಾಲೂಕು ಕುಲಾಲ-ಕುಂಬಾರ ಯುವ ವೇದಿಕೆ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಇದರ ತಾಲೂಕು ಯುವ ವೇದಿಕೆ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಗುರುವಾಯನಕೆರೆ ಇವರು ಆಯ್ಕೆಯಾಗಿದ್ದಾರೆ.
ಸೆ.೧೯ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಕುಲಾಲ-ಕುಂಬಾರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್ ಗುರುವಾಯನಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಕುಲಾಲ-ಕುಂಬಾರ ಯುವ ವೇದಿಕೆಯ ಕಾರ್ಯಕಾರಿ ಸಭೆಯಲ್ಲಿ ಮುಂದಿನ ಅವಧಿಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆರಿಸಲಾಯಿತು.
ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪರಾಜ್ ಲಾಯಿಲ, ಕೋಶಾಧಿಕಾರಿಯಾಗಿ ಮಾಧವ ಕುಲಾಲ್ ಶಿರ್ಲಾಲು, ಉಪಾಧ್ಯಕ್ಷರುಗಳಾಗಿ ಬಿ.ಹೆಚ್ ರಾಜು ಮತ್ತು ಕಿರಣ್ ಬಾರ್ಯ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಮಾಲಾಡಿ ಇವರು ಆಯ್ಕೆಯಾಗಿದ್ದಾರೆ.

ನಿಮ್ಮದೊಂದು ಉತ್ತರ