*ಬೆಳ್ತಂಗಡಿ:ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್(ರಿ) ವಲಯ ಸಮಿತಿ ಬೆಳ್ತಂಗಡಿ ಇದರ ವಿಶೇಷ ಸಭೆ.
ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಿ.ವಲಯ ಸಮಿತಿ ಬೆಳ್ತಂಗಡಿ ತಾಲೂಕು ಇದರ ವಿಶೇಷ ಸಭೆಯು ಸೆ. 14 ರಂದು ಮಂಜುಶ್ರೀಜೇಸಿ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಲಯ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಯಾದ ಸುರೇಂದ್ರ ಕೊಟ್ಯಾನ್ ವಹಿಸಿದ್ದರು.
ಸಭೆಯಲ್ಲಿ ಟೈಲರ್ಸ್ ವೃತ್ತಿ ಭಾಂಧವರಿಗೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳು ಹಾಗೂ ಜೀವ ಭದ್ರತೆಯ ವಿಮೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದಿಂದ ವಿವಿಧ ಉದ್ಯಮ ನಡೆಸಲು ಸಿಗುವ ಬ್ಯಾಂಕ್ ಸಾಲ ಸೌಲಭ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಉಷಾ ಕಾಮತ್ ರವರು ಸಂಪೂರ್ಣ ಮಾಹಿತಿ ನೀಡಿದರು. ಕ್ಷೇತ್ರ ಸಮಿತಿ ಅಧ್ಯಕ್ಷರಾದ ರಾಘವ ಪುತ್ರನ್ ಸಂಘಟನೆ ಬಲ ಪಡಿಸುವ ಕುರಿತು ಮಾತನಾಡಿದರು.
ಅಧ್ಯಕ್ಷ
ಕಾಯ೯ದಶಿ೯
ಕೋಧಿಕಾರಿ
ಇದೇ ಸಂದರ್ಭದಲ್ಲಿ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಅದ ಸುರೇಂದ್ರ ಕೋಟ್ಯಾನ್ ಮತ್ತು ಪದಾಧಿಕಾರಿಗಳು ಈ ಹಿಂದಿನ ಅಧ್ಯಕ್ಷರಿಂದ ಅಧಿಕಾರ ಸ್ವೀಕರಿಸಿದರು.ನಿರ್ಗಮನ ಅಧ್ಯಕ್ಷರಾದ ಹರೀಶ್ ಟೈಲರ್ ಹಾಗೂ ಕಾರ್ಯದರ್ಶಿ ಲಕ್ಷ್ಮೀಶರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಾಗೇಶ್ ಉಜಿರೆ,ಜಿಲ್ಲಾ ಸಮಿತಿ ಸದಸ್ಯರಾದ ಕುಶಾಲಪ್ಪ ಗೌಡ,ಮಾಜಿ ಅಧ್ಯಕ್ಷರಾದ ಶಾಂಭವಿ.ಪಿ.ಬಂಗೇರ ಮುಂತಾದ ಗಣ್ಯರು ಉಪಸ್ಥಿತರಿದ್ದರು. ವಲಯ ಸಮಿತಿ ಕಾರ್ಯದರ್ಶಿ ಶಶಿಕಲಾ ಸ್ವಾಗತಿಸಿದರು. ಉಮೇಶ್ ಪ್ರಾರ್ಥಿಸಿದರು. ಸದಾನಂದ ಸಾಲಿಯಾನ್ ಬಳಂಜ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಸಮಿತಿ ಕೋಶಾಧಿಕಾರಿ ವಿಶಾಲಾಕ್ಷಿ ವಂದಿಸಿದರು.