ಮುಂಡೂರು: ನಾಗರಾಧನೆಗೆ ಹೆಸರಾದ ತುಳುನಾಡಿನಲ್ಲಿ ಆ.೧೩ರಂದು ಸಂಭ್ರಮ-ಸಡಗರದಿಂದ ನಾಗರ ಪಂಚಮಿ ಜರುಗಿದ್ದು,
ಮುಂಡೂರಿನ ಶ್ರೀ ನಾಗಕಲ್ಲುರ್ಟಿ ದೈವಸ್ಥಾನದ ಕ್ಷೇತ್ರದಲ್ಲಿ ಕೋವಿಡ್-೧೯ರ ನಿಮಯವನ್ನು ಪಾಲಿಸಿ ಸರಳವಾಗಿ ನಾಗರ ಪಂಚಮಿಯನ್ನು ಆಚರಿಸಲಾಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರ ರಾಜೀವ್ ಅವರ ನೇತೃತ್ವದಲ್ಲಿ ನಾಗನ ಕಟ್ಟೆಯಲ್ಲಿ ಸಂಪ್ರದಾಯ ಪ್ರಕಾರ ನಾಗರಾಧನೆಯನ್ನು ನಡೆಸಲಾಯಿತು. ಕ್ಷೇತ್ರದ ಪದಾಧಿಕಾರಿಗಳು, ಕ್ಷೇತ್ರದ ಭಕ್ತರು ಈ ಸಂದರ್ಭ ಉಪಸ್ಥಿತರಿದ್ದರು.