ಕೊಕ್ಕಡ: ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಕೊಕ್ಕಡ ಗ್ರಾಮ ಸಮಿತಿಯ ಸಭೆ ಹಾಗೂ ಸಹಾಯ ಹಸ್ತ ಕಾರ್ಯಕ್ರಮ ಆ. ೫ ರಂದು ಕೊಕ್ಕಡ ಯುವ ಕಾಂಗ್ರೆಸ್ ಕಛೇರಿ ಸಭಾಂಗಣದಲ್ಲಿ ಜರಗಿತು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ನಿರ್ದೇಶನದಂತೆ ಪ್ರತೀ ಗ್ರಾಮ ಮಟ್ಟದಲ್ಲಿ ಕೋವಿಡ್ ಸಹಾಯ ಹಸ್ತ ಎಂಬ ಕಾರ್ಯಕ್ರಮದ ಅನುಷ್ಠಾನ ಮಾಡಿದ್ದು ಅದರ ಮಾಹಿತಿಯನ್ನ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಂಜನ್ ಜಿ.ಗೌಡ ನೀಡಿದರು. ಕೊರೊನದಿಂದ ಪಾಸಿಟಿವ್ ಬಂದವರ ಹಾಗೂ ಮೃತರ ಮನೆಗಳಿಗೆ ಬೂತ್ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಪಿ. ಬೆಳಾಲ್, ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಕೊಕ್ಕಡ ಗ್ರಾ.ಪಂ. ಮಾಜಿ ಅಧ್ಯಕ್ಷ ಸಭಾಸ್ಟಿನ್, ಕೊಕ್ಕಡ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ ಹಕೀಂ, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಜಸ್ಟೀಸ್, ಬೂತ್ ಸಮಿತಿ ಅಧ್ಯಕ್ಷ ರವಿ, ಫಾರೂಕ್, ಬೂತ್ ಸಮಿತಿ ಕಾರ್ಯದರ್ಶಿ ಗಣೇಶ್ ಕಾಶಿ, ಲಿಯೋ ಮಂಥೇರೋ, ಗ್ರಾಮ ಸಮಿತಿ ಹಕೀಂ, ಆರ್. ಕೆ ಅಮಿತ್ ಮಂಥೇರೋ ಪದಾಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು