ಬೆಳ್ತಂಗಡಿ : ಇಲ್ಲಿಯ ಕಳಿಯ ಗ್ರಾಮದ ಕೊರೊನಾ ಸೋಂಕು ತಗುಲಿ ಮೃತರಾದ ಪೇರಾಜೆ ನಿವಾಸಿ ಜಿನ್ನಪ್ಪ ಗೌಡರ ಮನೆಗೆ ಪ್ರಿನ್ಸಿಪಾಲ್ ಜಿಲ್ಲಾ ತರಭೇತಿ ಕೇಂದ್ರ ಕೋವಿಡ್ ನೋಡಲ್ ಅಧಿಕಾರಿ ಡಾ.ಆಶೋಕ್ ಮತ್ತು ಜಿಲ್ಲಾ ಸರ್ವೇವೀಕ್ಷಾಣಾಧಿಕಾರಿ ಡಾ.ಜಗದೀಶ್ ಹಾಗೂ ಅವರ ತಂಡ ಆ.1 ರಂದು ಭೇಟಿ ನೀಡಿದರು.
ಮೃತ ವ್ಯಕ್ತಿಯ ಪುತ್ರ ಬೇಬಿ ಪಿ.ಜೆ ದೆಹಲಿಯ
ಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಒಂದು ತಿಂಗಳ ಹಿಂದೆ ರಜೆ ಪಡೆದು ಊರಿಗೆ ಬಂದಿರುತ್ತಾರೆ. ಅವರು ಸೈನಿದಲ್ಲಿ ಕರ್ತವ್ಯದಲ್ಲಿ
ರುವಾಗ ಕೊರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು.ಅವರು ಊರಿಗೆ ಬಂದು ಸರಕಾರದ ನಿಯಮದಂತೆ ಕ್ವಾರೈಂಟೈನ್ ನಲ್ಲಿ ಇದ್ದರು ಆದರೂ ಮನೆಯವರಿಗೆ ಸೋಂಕು ತಗುಲಿತ್ತು. ಎಂದುಮಂಗಳೂರು ವೈದ್ಯಾಧಿಕಾರಿಗಳ ತಂಡ ಈ ಸಂದರ್ಭದ ತಿಳಿಸಿದ್ದಾರೆ.
ಈಗಾಗಲೇ ಮೃತ ವ್ಯಕ್ತಿಯ ಮನೆಯವರಿಗೆ ಮತ್ತು ಹತ್ತಿರದ ಸಂಬಂಧಿಕರ 20 ಕ್ಕೂ ಹೆಚ್ಚು ಜನರ ಗಂಟಲು ದ್ರವದ ಪರೀಕ್ಷೆಯನ್ನು ಜು.28 ರಂದು ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಕಾರ್ಯಕರ್ತೆ ಸಿಬ್ಬಂದಿಗಳು ನಡೆಸಿದರು.ಈ ಪೈಕಿ ಮೃತರ ಮನೆಯವರು ಸೇರಿದಂತೆ 14 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ವೈದ್ಯರ ತಂಡ ಇಲ್ಲಿಗೆ ಭೇಟಿ ನೀಡಿದೆ ಎಂದು ಹೇಳಿದರು.
ಸೀಲ್ ಡೌನ್ ಗೆ ಸೂಚನೆ:
ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ ಮಾತನಾಡುತ್ತಾ ಸ್ಥಳೀಯ ಪ್ರದೇಶದಲ್ಲಿ ಸೀಲ್ ಡೌನ್ ಮಾಡುವಂತೆ ಕಳಿಯ ಗ್ರಾಮ ಪಂಚಾಯತು ಅಧಿಕಾರಿಗಳಿಗೆ ತಿಳಿಸಿದರು. ಮತ್ತು ಹತ್ತಿರದ ಮನೆಯ ಸದಸ್ಯರ ಗಂಟಲು ದ್ರವದ ಪರೀಕ್ಷೆ ನಡೆಸಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಹೇಳಿದರು.
ನೇರ ರಾಜ್ಯದಲ್ಲಿ ಕೊರೊನಾ ಸೋಂಕು ವಿಪರೀತವಾಗಿದೆ ಹೊರ ರಾಜ್ಯದಿಂದ ಬರುವ ಜನರನ್ನುಕಡ್ಡಾಯಪರೀಕ್ಷೆಗೆಒಳಪಡಿಸಲಾಗುತ್ತದೆ. ಸ್ಥಳೀಯವಾಗಿ ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸ ಬೇಕು.ಅಡ್ಡಿ ಪಡಿಸುವ ವ್ಯಕ್ತಿಗಳ ಮೇಲೆ ಪೊಲೀಸ್ ಕೇಸು ದಾಖಲಿಸಿ ಎಂದು ಖಡಕ್ಕಾಗಿ ಹೇಳಿದರು. ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಮಹೇಶ್ ಜೆ. ತಾಲೂಕು ಸಮುದಾಯ ಆರೋಗ್ಯಾಧಿಕಾರಿ ಡಾ. ಕಲಾಮಧು,ಪಡಂಗಡಿ ಪ್ರಾಥಮಿಕ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ಸಂಜತ್ ಬಿ.ಆರ್,ಅಭಿಷೇಕ್, ಹಿರಿಯ ಆರೋಗ್ಯ ಸಹಾಯಕಿ ಪ್ರೀಯಾ,ಕಿರಿಯ ಆರೋಗ್ಯ ಸಹಾಯಕಿ ಶಕುಂತಲಾ,ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ,ಆಶಾ ಕಾರ್ಯಕರ್ತೆ ಸುಭಾಷಿಣಿ ಜನಾರ್ದನ ಗೌಡ ಕೆ,ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕುಂಞ್ಞಣ್ಣ, ನ್ಯಾಯತರ್ಫು ಗ್ರಾಮ ಬೀಟ್ ಪೊಲೀಸ್ ಕಿರಣ್ ನಾಯ್ಕ ಎಸ್,ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್ ಮತ್ತು ಪಂಚಾಯತು ಸಿಬ್ಬಂದಿ ರವಿ ಹೆಚ್. ಉಪಸ್ಥಿತರಿದ್ದರು.