ಗ್ರಾಮಾಂತರ ಸುದ್ದಿ

ಸವಣಾಲು ಬೈರವಕಲ್ಲು ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಸ್ಥಾನ ಜೀರ್ಣೋದ್ಧಾರಕ್ಕೆ ಸಂಕಲ್ಪ

ಬೆಳ್ತಂಗಡಿ : ಸವಣಾಲು ಗ್ರಾಮದ ಬೈರವಕಲ್ಲು ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಸ್ಥಾನವನ್ನು ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್‌ನ ಮೂಲಕ ಜೀರ್ಣೋದ್ದಾರ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಚಿನ್ನಯ್ಯ ಮಲೆಕುಡಿಯ ಮತ್ತು ಕಾರ್ಯದರ್ಶಿ ಜಯಾನಂದ ಪಿ. ಪಿಲಿಕಲ ಹೇಳಿದರು.


ಅವರು ಜು.31 ರಂದು ದೈವಸ್ಥಾನದ ವಠಾರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸವಣಾಲು ಗ್ರಾಮದ ಬೈರಕಲ್ಲು ಎಂಬಲ್ಲಿ ಸುಮಾರು 700 ವರ್ಷಗಳ ಹಿಂದೆ ಬಂಡೆ ಕಲ್ಲಿನ ಮೇಲೆ ನೆಲೆ ನಿಂತಿರುವ ಕ್ಷೇತ್ರವೇ ಶ್ರೀ ಕ್ಷೇತ್ರ ಬೈರವ ಇಲ್ಲಿ ಮಲೆಕುಡಿಯ ಸಮಾಜ ಬಾಂಧವರ ನೇತೃತ್ವದಲ್ಲಿ ವೈಭವಯುತವಾಗಿ ದೈವದ ಕಾರ್ಯ ನಡೆಯುತ್ತಾ ಇತ್ತು.ಹಲವಾರು ವರುಷ
ಗಳಿಂದ ಯಾವುದೇ ದೈವದ ಕಾರ್ಯ ನಡೆಯದೇ ಸಾಂಪ್ರದಾಯಿಕವಾಗಿ ದೈವದ ಪರ್ವ ಸೇವೆ ನಡೆಯುತ್ತಾ ಬರುತ್ತಿತ್ತು. ಕಳೆದ ಐದು ವರ್ಷಗಳಿಂದ ಇದನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಮಲೆಕುಡಿಯ ಸಮಾಜದ ಈ ದೈವಸ್ಥಾನಕ್ಕೆ ಸಂಬಂಧಿಸಿದ 28 ಮನೆಗಳವರು ಸಂಕಲ್ಪ ಮಾಡಿದ್ದೇವೆ.

ಈ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅಂದಾಜುರೂ.1.50ಕೋಟಿವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಜನಪ್ರತಿನಿಧಿಗಳು, ಊರ ಎಲ್ಲಾ ಸಮಾಜ ಬಾಂಧವರು, ಸಂಘ ಸಂಸ್ಥೆಗಳು, ಇಲಾಖಾ ವತಿಯಿಂದ ಸಹಕಾರ ಕೋರುತ್ತೇವೆ.ಹಿಂದಿನ ಕಾಲದಲ್ಲಿ ನಡೆಯುತ್ತದ್ದ ಸಂಪ್ರಾದಾಯ ದೈವಸ್ಥಾನ ಧಾರ್ಮಿಕ ಕಾರ್ಯಕ್ರ
ಮಗಳನ್ನು ಮುಂದುವರಿಸಲು ಬದ್ಧರಾಗಿದ್ದು ಈ ವ್ಯವಸ್ಥೆಗಳಾಗಿ ದೈವಸ್ಥಾನಕ್ಕೆ ಸಂಬಂಧಿಸಿದ 28 ಮನೆಗಳ ಸದಸ್ಯರನ್ನೊಳಗೊಂಡ ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್ ರಚಿಸಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಸಾಂತಪ್ಪ ಮಲೆಕುಡಿಯ, ಗೌರವಾಧ್ಯಕ್ಷ ಮಹಾಬಲ ಮಲೆಕುಡಿಯ, ಕೋಶಾಧಿಕಾರಿ ಸುಂದರ ಮಲೆಕುಡಿಯ, ಗುತ್ತು ಮನೆಯ ಮಾಲಕ ರಾಮಣ್ಣ ಮಲೆಕುಡಿಯ, ಜೊತೆ ಕಾರ್ಯದರ್ಶಿ ಕುಸುಮಾಧರ ಮೊದಲಾದವರು ಹಾಜರಿದ್ದರು.

 

ನಿಮ್ಮದೊಂದು ಉತ್ತರ