ಬೆಳ್ತಂಗಡಿ : ಬಂಟ್ವಾಳ ತಾಲೂಕಿನ ಕಾವಳಪ
ಡೂರು ಗ್ರಾಮದ ಮಧ್ವದ ಮಧ್ವ ಯಕ್ಷಕೂಟ ವತಿಯಿಂದ ಮಧ್ವಪ್ಯಾಲೇಸ್ ಸಭಾಂಗ
ಣದಲ್ಲಿ ಜು24ರಂದು ತಾಳಮದ್ದಳೆ ಕಾರ್ಯಕ್ರ
ಮ ನಡೆಯಿತು.
ಜ್ಯೋತಿಷ ವಿದ್ವಾನ್ ವೆಂಕಟರಮಣ ಮುಚ್ಚಿನ್ನಾಯಕಾರಿಂಜಅವರುಕಾರ್ಯಕ್ರಮವನ್ನುಉದ್ಘಾಟಿಸಿಮಾತನಾಡಿ, ಯಕ್ಷಗಾನದ ಮೂಲಕ ಧರ್ಮಶಾಸ್ತ್ರ, ರಾಮಾಯಣ,ಮಹಾಭಾರತ ಮೊದಲಾದ ಪುರಾಣ ಗ್ರಂಥಗಳ ಕಥೆಗಳ ಪ್ರಚಾರ ಕಾರ್ಯ ನಡೆಯುತ್ತಿದ್ದು, ಯಕ್ಷಗಾನಕ್ಕೆ ಮತ್ತು ಕಲಾವಿದರಿಗೆಪ್ರೋತ್ಸಾಹ
ನೀಡಬೇಕು ಎಂದು ಹೇಳಿದರು.
ಶ್ರೀ ಮಧ್ವಾಚಾರ್ಯರು ನಡೆದಾಡಿದ ಮಧ್ವದಲ್ಲಿ ಮತ್ತು ಶ್ರೀ ಪೇಜಾವರ ಶ್ರೀಗಳಿಂದ ಉದ್ಘಾಟಿ
ಸಲ್ಪಟ್ಟು ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹ ನೀಡುವ ಮಧ್ವ ಯಕ್ಷ ಕೂಟದ ಕಾರ್ಯ ಅಭಿನಂದನೀಯ ಎಂದರು.