ಗ್ರಾಮಾಂತರ ಸುದ್ದಿ

ಸವಣಾಲು ಗ್ರಾಮದ ಜಯಶ್ರೀ ಪಿಲಿಕಲ ಪ್ರಥಮ ದರ್ಜೆ ಸಹಾಯಕರಾಗಿ ನಿಯುಕ್ತಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಪಿಲಿಕಲ ಎಂಬಲ್ಲಿನ ಮಲೆಕುಡಿಯ ಸಮುದಾಯದ ಜಯಶ್ರೀ ಪಿಲಿಕಲ ರವರು ದೇವರಾಜು ಅರಸು ಅಭಿವೃದ್ಧಿ ನಿಗಮ ಮೂಲ್ಕಿ ತಾಲೂಕು ಇಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿಯುಕ್ತರಾಗಿದ್ದಾರೆ.

ಇವರು ನೆರಿಯ ಆಲಂಗಾಯಿ ಆಶ್ರಮ ಶಾಲೆಯಲ್ಲಿ ಪ್ರಾಥಮಿಕ , ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಸವಣಾಲು ಇಲ್ಲಿ ಪ್ರೌಢ ಶಿಕ್ಷಣ , ಪಿಯುಸಿ ಶಿಕ್ಷಣ ಗುರುದೇವ ಕಾಲೇಜ್ , ಪದವಿ ಶಿಕ್ಷಣವನ್ನು ಎಸ್.ಡಿ.ಎಂ ಕಾಲೇಜಿನಲ್ಲಿ , ಸ್ನಾತಕೋತ್ತರ ಪದವಿಯನ್ನು (MHRD) ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿರುತ್ತಾರೆ.

ಇವರು ಸವಣಾಲು ಗ್ರಾಮದ ಪಿಲಿಕಲ ಮಹಾಬಲ ಮಲೆಕುಡಿಯ ಎಂಬವರ ಮಗಳಾಗಿದ್ದು , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ , ದ.ಕ ಜಿಲ್ಲಾ ಸಹಸಂಚಾಲಕ , ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲರವರ ಸಹೋದರಿಯಾಗಿದ್ದಾರೆ.

ನಿಮ್ಮದೊಂದು ಉತ್ತರ