ಬೆಳ್ತಂಗಡಿ: *”ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ” ಘೋಷಣೆಯಡಿಯಲ್ಲಿ ಜೂ. 26 ರಂದು ಭಾರತಾದ್ಯಂತಪ್ರತಿಭಟನೆ ನಡೆಸಿ ದೆಹಲಿಯಲ್ಲಿ ಕಳೆದ ಏಳು ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಹೋರಾಟ ನಡೆಸಲು ರೈತ ಸಂಯುಕ್ತ ಮೋರ್ಚ ನೀಡಿದ ಕರೆಯಂತೆ ಬೆಳ್ತಂಗಡಿಯಲ್ಲೂ ಪ್ರತಿಭಟನೆ ನಡೆಸಲಾಯಿತು.*
*ಹಿರಿಯಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಮಾತಾಡುತ್ತಾ ಕೊರೋನಾ ಸಂಕಷ್ಟದ ಲಾಕ್ ಡೌನ್ ಸಮಯ 2020 ರಲ್ಲಿ ರೈತ ವಿರೋಧಿ
ಯಾಗಿ ರೈತ ಪರಮಸೂದೆಗಳತಿದ್ದುಪಡಿಮಾಡಿದ
ಬಿಜೆಪಿಸರಕಾರದನಡೆಭಾರತೀಯರವಿರುದ್ದವಾದ ನಡೆಯಾಗಿದೆ ಎಂದರು.ಕಳೆದಏಳುತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವಹೋರಾಟಕ್ಕೆ ಸ್ಪಂದನೆ ನೀಡದ ನರೇಂದ್ರಮೋದಿನೇತೃತ್ವ
ದಸರಕಾರಭಾರತೀಯರ ಪಾಲಿಗೆ ಬ್ರಟೀಶ್ ಸರ
ಕಾರಕ್ಕಿಂತಲೂಕೆಟ್ಟದ್ದಾಗಿದೆ ಎಂದು ಸಾಭೀತು ಮಾಡುತ್ತಿದ್ದಾರೆಎಂದರು.
ರೈತ ವಿರೋದಿಯಾದ ಭೂಸುಧಾರಣಾ ಕಾಯ್ದೆಗೆ ತಂದ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆಗೆ ತಂದ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ಹಿಂಪಡೆದು ರೈತರ ಬೇಡಿಕೆ ಈಡೇರಿಕೆ ಆಗುವ ತನಕ ನಮ್ಮ ಹೋರಾಟ ನಿಲ್ಲದು ಎಂದರು.
ಮೊದಲಿಗೆ ರೈತ ಸಂಘದ ತಾಲೂಕು ಅಧ್ಯಕ್ಷ ರಾದ ಲಕ್ಷಣ ಗೌಡ ಸ್ವಾಗತಿಸಿದರು. ಕೊನೆಗೆ ರೈತ ನಾಯಕ ಶ್ಯಾಮರಾಜ್ ವಂದಿಸಿದರು. ಡೊಂಬಯಗೌಡ, ಬೊಮ್ಮ ಗೌಡ, ವಸಂತ ಟೈಲರ್, ಲಕ್ಷ್ಮಣ ಗೌಡ ಜಾಲು, ದೊಲ್ಲ ಗೌಡ, ರಾಮಚಂದ್ರ, ಜಯಶ್ರಿ, ಜನಾರ್ಧನ ಆಚಾರ್ಯ, ಸದಾಶಿವ ಶೆಟ್ಟಿ , ವಿನುಶರಮಣ, ಕಮಲ, ಗೌರಿ ಮೊದಲಾದವರಿದ್ದರು.*