ನೆರಿಯ ಗ್ರಾಮದ ಅಣಿಯೂರುನಿಂದ ಕಾಟಾಜೆ , ಪರ್ಪಳಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳೆದ ಎಪ್ರಿಲ್ ನಿಂದ ನಡೆಯುತ್ತಿದೆ.
ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಖಾಸಗಿ ವಿದ್ಯುತ್ ಘಟಕದ ವಿದ್ಯುತ್ ಪೂರೈಕೆ ಕಂಬಗಳು ಇದೆ.
ಇಲ್ಲಿ ವಿದ್ಯುತ್ ಕಂಬಗಳ ಬುಡದವರೆಗೆ ಮಣ್ಣಿನ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಕಂಬಗಳ ಬುಡದಲ್ಲಿ ಮಣ್ಣು ಸವೆದು ನಿನ್ನೆ ರಾತ್ರಿ 8 ವಿದ್ಯುತ್ ಕಂಬಗಳು ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಇಲ್ಲಿ ಇನ್ನಷ್ಟು ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಈ ಭಾಗದಲ್ಲಿ ರಬ್ಬರ್, ಅಡಿಕೆ ತೋಟಗಳಲ್ಲಿ ಗಾಳಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.