ಕುವೆಟ್ಟು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮ ಸಮಿತಿಯ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ಹಾಗು ಗ್ಯಾಸ್ ಬೆಲೆ ಏರಿಸಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಯು ಜೂ. 14 ರಂದು ಕುವೆಟ್ಟು ಗ್ರಾ.ಪಂ ಮುಂಭಾಗದಲ್ಲಿ ನಡೆಯಿತು.
ಪ್ರತಿಭಟನೆಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಕೆ ಹರೀಶ್ ಕುಮಾರ್ ಮಾತನಾಡಿ ಇತ್ತೀಚಿನ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಲೀಟರ್ ಪೆಟ್ರೋಲ್‌ಗೆ ೩೫ ರೂ ಆಗಿದ್ದರೂ ಕೂಡ ತೆರಿಗೆ ರೂಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ೬೫ ರೂ. ಸೇರಿಸಿ ೧೦೦ ರೂ. ಮಾರಾಟ ಮಾಡುತ್ತಿರುವುದು ಹಗಲು ದರೋಡೆ ಆಗಿದೆ. ಕೊರೋನದ ಸಂಕಷ್ಟದ ಸಮಯದಲ್ಲಿ ಜನರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಈ ಸಂದರ್ಭ ಬೆಲೆ ಏರಿಕೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರದ ಧೋರಣೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದರು.
ಸಭೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ ರಂಜನ್ ಜಿ. ಗೌಡ, ಜಿ.ಪಂ ಸದಸ್ಯ ಶೇಖರ ಕುಕ್ಕೆಡಿ, ಹಾಗೂ ತಾ.ಪಂ ಸದಸ್ಯ ಗೋಪಿನಾಥ್ ನಾಯಕ್, ತಾಲೂಕು ಎಸ್.ಸಿ ಘಟಕದ ಅಧ್ಯಕ್ಷ ವಸಂತ ಬಿ.ಕೆ, ಎ.ಪಿ ಎಂ.ಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್,ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಪ್ರಭಾಕರ ಎಸ್, ಯುವ ಇಂಟಕ್ ಅಧ್ಯಕ್ಷ ಅನೂಪ್ ಎಂ. ಬಂಗೇರ,ರಫೀಕ್ ಜಿ. ಕೆರೆ, ಮಹಮ್ಮದ್ ರಾಝಿಯುದ್ದಿನ್ ಸಬರಬೈಲು, ಬದ್ರುದ್ದಿನ್ ಮದ್ದಡ್ಕ, ಸಿರಾಜ್ ಚಿಲಿಂಬಿ, ಕುವೆಟ್ಟು ಪಂಚಾಯತ್ ಮಾಜಿ ಸದಸ್ಯ ರಿಯಾಜ್ ಅಹಮದ್, ಸಿರಾಜ್ ಪಾಡ್ಯಾರ್ ಹಾಗು ಕಾರ್ಯಕರ್ತರು ಭಾಗವಹಿಸಿದ್ದರು. ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ಕೆ. ಸಲೀಂ ಸ್ವಾಗತಿಸಿ ಉಮರಬ್ಬ ಮದ್ದಡ್ಕ ಧನ್ಯವಾದ ಸಲ್ಲಿಸಿದರು.