ಗ್ರಾಮಾಂತರ ಸುದ್ದಿ

ಬಿಪಿಎಸ್ ಯಿಂದ ಶಿಕ್ಷಣ ಮತ್ತುಅರೋಗ್ಯಸರ್ಕಾರಿಕರಣಗೊಳಿಸುವಂತೆ ಒತ್ತಾಯಿಸಿ ಟ್ವಿಟ್ಟರ್ ಅಭಿಯಾನ

ಬೆ ಳ್ತಂಗಡಿ    :  ಭಾರತೀಯ ಪರಿವರ್ತನಾ ಸಂಘ (ಬಿಪಿಎಸ್) ವತಿಯಿಂದ ಜೂ. 7 ರಂದು ಸಂಜೆ  ಶಿಕ್ಷಣಮತ್ತುಅರೋಗ್ಯಸರ್ಕಾರಿಕರಣಗೊಳಿಸುವಂತೆ ಒತ್ತಾಯಿಸಿ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿತ್ತು. ಅದರ ಅಂಗವಾಗಿ ಬಿಪಿಎಸ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದಲು ಕೋವಿಡ್ ನಿಯಮವನ್ನು ಪಾಲಿಸಿ ಕಾರ್ಯಕರ್ತರುಗಳ ಮನೆಯಿಂದಲೇ *”ಟ್ಯಾಕ್ಸ್ ತಗೊಳ್ಳಿ ಉಚಿತ ಶಿಕ್ಷಣ ಮತ್ತು ಉಚಿತ ಆರೋಗ್ಯ ಸೇವೆ ನೀಡಿ”* ಎಂಬ ಪೋಸ್ಟರನ್ನು ಹಿಡಿದು ಟ್ವಿಟರ್, ವಾಟ್ಸ್ ಆಪ್, ಟೆಲಿಗ್ರಾಂ, ಇನ್ಸ್ಟಾಗ್ರಾಮ್ ಎಲ್ಲರೂ ಒಂದೇ ಹಾಸ್ಟೇಗ್ ಉಪಯೋಗಿಸಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ತಾಲೂಕು ಬಿಪಿಎಸ್ ಮುಂಖಡರುಗಳಾದ ಸಂಜೀವ ಆರ್, ರಮೇಶ್ ಆರ್, ಲಕ್ಷ್ಮಣ್ ಜಿ.ಎಸ್.,ವಿಶ್ವನಾಥ್ ಕಳೆಂಜ ಹಾಗೂ ಬಿವಿಎಸ್ ಬೆಳ್ತಂಗಡಿ ಇದರ ಕಾರ್ಯಕರ್ತರುಗಳಾದ ಸುಕೇಶ್ ಮಾಲಾಡಿ, ಸಂತೋಷ್. ಆರ್, ಜಯಂತ್ ನಿಟ್ಟಡೆ ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ