ಗ್ರಾಮಾಂತರ ಸುದ್ದಿ

ನಾವೂರು: 78 ನೇ ವರ್ಷದ ಸ್ವಾತಂತ್ರ್ಯೋತ್ಸವ

ನಾವೂರು: ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ನಾವೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು,
ಗ್ರಾಮ ಪಂಚಾಯತ್,ಪ್ರೌಢ ಶಾಲಾ ಮೈದಾನ,
ಪ್ರಾಥಮಿಕ ಶಾಲಾ ವಠಾರ,ಹಾಗೂ ಅಂಗನವಾಡಿ ಕೇಂದ್ರ ಗಳಲ್ಲಿಧ್ವಜಾರೋಹಣ ಮಾಡಿ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು,
ತದನಂತರ ಪ್ರಾಥಮಿಕ ಶಾಲೆಯಲ್ಲಿಸಭಾ ಕಾರ್ಯಕ್ರಮ ನೆರವೇರಿತು,ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪ್ರಭು ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭಾ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ವಿ, ಪಿ, ಆಂಟನಿ ಸಂಪಿಂಜೆ, ಸೆಬಾಸ್ಟಿನ್ ವಿ.ಪಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ,ನಾವೂರು, ರಜತ್ ಮೂರ್ತಾಜೆ ಕಾರ್ಯದರ್ಶಿ ಹಿರಿಯ ವಿದ್ಯಾರ್ಥಿ ಸಂಘ ನಾವೂರು,
ಶೃತಿ ಜೈನ್ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ,
ಸುನಂದ ಗ್ರಾಪಂ ಅಧ್ಯಕ್ಷರು ನಾವೂರು,ಗಣೇಶ್ ನೆಲ್ಲಿಪಲ್ಕೆ ಗ್ರಾಪಂ ಸದಸ್ಯರು ನಾವೂರು,
ಪಂಚಾಕ್ಷರಿ ದೈಹಿಕ ಶಿಕ್ಷಕರು ಪ್ರಾಥಮಿಕ ಶಾಲೆ ನಾವೂರು
ಹಾಜರಿದ್ದರು,
ಈ ಸಂದರ್ಭ ಅತಿ ಹೆಚ್ಚು ಅಂಕಗಳಿಸಿರುವ ವಿ ದ್ಯಾರ್ಥಿಗಳಾದತ ರುಣ್ ಆರ್, ಕೆ, ಪ್ರಥಮ ,ಮ ಹಮ್ಮದ್ ಮುಭಾಷಿರ್ ತಾಕ್ಮಲ್ದ್ವಿ  ತೀಯ, ಇವರನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಗದು ಹಣ ನೀಡಿ ಸನ್ಮಾನಿಸಿ ಗೌರವಿಸಲಾಯಿತು,

ದೈಹಿಕ ಶಿಕ್ಷಕ ಪಂಚಾಕ್ಷರಿ ಸ್ವಾಗತಿಸಿದ ಈ ಕಾರ್ಯಕ್ರಮವನ್ನು ಶೋಭಾ ಪಿ, ಡಿ ವಂದಿಸಿದರು, ಶುಭ ಕಾರ್ಯಕ್ರಮ ನಿರೂಪಿಸಿದರು, ತದನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

ನಿಮ್ಮದೊಂದು ಉತ್ತರ